ಕಾಸರಗೋಡು : ನ್ಯಾಯವಾದಿ ಅಶೋಕನ್ ಹೃದಯಾಘಾತದಿಂದ ನಿಧನ
Update: 2023-05-02 17:26 GMT
ಕಾಸರಗೋಡು: ಮದ್ರಸ ಅಧ್ಯಾಪಕರಾಗಿದ್ದ ರಿಯಾಝ್ ಮೌಲವಿ ಕೊಲೆ ಪ್ರಕರಣದ ವಿಚಾರಣೆಯ ಸ್ಪೆಷಲ್ ಪ್ರಾಸಿಕ್ಯೂಟರ್ ನ್ಯಾಯವಾದಿ ಅಶೋಕನ್ (55) ಹೃದಯಾಘಾತದಿಂದ ನಿಧನರಾದರು.
ಮಾವೆಲಿಕ್ಕರದಲ್ಲಿ ಪ್ರಕರಣವೊಂದರ ವಿಚಾರಣೆ ಮುಗಿಸಿ ಮರಳುತ್ತಿದ್ದಾಗ ಸೋಮವಾರ ರಾತ್ರಿ ಎರ್ನಾಕುಲಂ ಗೆ ತಲಪಿದಾಗ ಘಟನೆ ನಡೆದಿದೆ.
ರಿಯಾಝ್ ಮೌಲವಿ ಕೊಲೆ ಪ್ರಕರಣದ ವಿಚಾರಣೆ ಮುಗಿದು ತೀರ್ಫು ಹೊರಬೀಳಲು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಪ್ರಾಸಿಕ್ಯೂಟರ್ ರವರ ಅಕಾಲಿಕ ನಿಧನರಾಗಿದ್ದು, ಹೊಸ ಪ್ರಾಸಿಕ್ಯೂಟರ್ ರವರ ನೇಮಕದ ಬಳಿಕ ಮುಂದಿನ ವಿಚಾರಣೆ ಮುಂದುವರಿಯಲಿದೆ.