ವಿದ್ಯಾರ್ಥಿಗಳ ಮತ ಶಿಕ್ಷಣ, ಉದ್ಯೋಗ ಖಾತ್ರಿ ಪಡಿಸುವ ಅಭ್ಯರ್ಥಿಗೆ ಮತ ಆಗಿರಲಿ: ಎಸ್‌ಐಓ
ಉಡುಪಿ, ಮೇ 9: ನಾಳೆ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯು ಎಲ್ಲಾ ಪ್ರಜ್ಞಾವಂತ ಪ್ರಜೆಗಳಿಗೆ ಒಂದು ವಿಶೇಷ ದಿನ. ಆದುದರಿಂದ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕನ್ನು ಬಹಳ ಗಂಭೀರವಾಗಿ ಚಲಾಯಿಸಿ ಅರ್ಹ ಅಭ್ಯರ್ಥಿಯನ್ನು ಗೆಲ್ಲಿಸಿಬೇಕಾಗಿದೆ ಎಂದು ಎಸ್‌ಐಓ ಉಡುಪಿ ಜಿಲ್ಲೆ ಮನವಿ ಮಾಡಿದೆ.
ಎಸ್.ಐ.ಓ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಆಗಿರುವುದರಿಂದ ಈಗಾಗಲೇ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪ್ರಣಾಳಿಕೆಯನ್ನು ತಯಾರಿಸಿ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ತುರ್ತಾಗಿ ಅವಶ್ಯಕತೆಯಿರುವ ಬೇಡಿಕೆಗಳನ್ನು ಸಹ ವಿವಿಧ ಪಕ್ಷದ ನಾಯಕರಿಗೆ ನೀಡಿದ್ದೇವೆ.
ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಯುವಕರು ನಾಳೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಯಾವುದೇ ಆಮಿಷಕ್ಕೆ ಮತ್ತು ಒತ್ತಡಕ್ಕೆ ಬಲಿಯಾಗದೆ ಮುಂದಿನ ಐದು ವರ್ಷ ಗಳ ಕಾಲ ಶೈಕ್ಷಣಿಕವಾಗಿ ಉದ್ಯೋಗ ಸೃಷ್ಟಿಸುವ ಹಾಗೂ ನಾಡಿನ ಜನತೆಗೆ ಪ್ರೀತಿ, ಸಾಮರಸ್ಯ ಸಹಬಾಳ್ವೆ ಬಯಸುವ ದೃಷ್ಟಿಯಿಂದ ಅರ್ಹ ಅಭ್ಯರ್ಥಿಯನ್ನು ಗೆಲ್ಲಿಸಿಬೇಕಾಗಿದೆ ಎಂದು ಎಸ್‌ಐಓ ಪ್ರಕಟಣೆಯಲ್ಲಿ ಮನವಿ ಮಾಡಿದೆ.