ಕಾಂಗ್ರೆಸ್ ಗೆ ಮತ ಹಾಕಿದಕ್ಕೆ ರಿಕ್ಷಾ ಚಾಲಕನಿಗೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ; ಎಫ್ಐಆರ್ ದಾಖಲು

Update: 2023-05-14 07:30 GMT

ಕಾರ್ಕಳ: ಕಾಂಗ್ರೆಸ್‌ಗೆ ಮತ ಹಾಕಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತನೊಬ್ಬ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ನಿಂಜೂರು ಗ್ರಾಮದ ಪಾತಾವು ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ನಿಂಜೂರು ಗ್ರಾಮದ ಕಲ್ಲಂಜೆ ನಿವಾಸಿ ರಿತೇಶ್ (27) ಎಂದು ಗುರುತಿಸಲಾಗಿದೆ. ಪಳ್ಳಿ ಗ್ರಾಮದಲ್ಲಿ ಅಟೋರಿಕ್ಷಾ ಚಾಲಕ ನಾಗಿ ಕೆಲಸ ಮಾಡಿಕೊಂಡಿರುವ ರಿತೇಶ್ ಬಾಡಿಗೆ ಮುಗಿಸಿ ರಿಕ್ಷಾದಲ್ಲಿ ಬರುತ್ತಿದ್ದಾಗ ಕಾರಿನಲ್ಲಿ ಬಂದ ಬಿಜೆಪಿ ಕಾರ್ಯಕರ್ತ ಪಳ್ಳಿ ಗ್ರಾಮದ ನಿವಾಸಿ ಚರಣ್ ಎಂಬಾತ, ರಿಕ್ಷಾವನ್ನು ತಡೆದು ನಿಲ್ಲಿಸಿದ್ದಾನೆ ಎನ್ನಲಾಗಿದೆ.

‘ನೀನು ಯಾರಿಗೆ ಓಟು ಹಾಕಿದ್ದೀ ಎಂದು ರಿಕ್ಷಾವನ್ನು ತೋಡಿಗೆ ದೂಡಲು ಪ್ರಯತ್ನಿಸಿದ್ದಲ್ಲದೇ ನಿಮ್ಮ ಅಣ್ಣ ಅನೂರು ಶೆಟ್ಟಿ ಎಲ್ಲಿದ್ದಾನೆ. ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News