ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ, ಉಡುಪಿ ಜಿಲ್ಲೆ ವತಿಯಿಂದ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟ್
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIF) ವ್ಯಾಪ್ತಿಯ ದ.ಕ. ಮತ್ತು ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಗರಿಷ್ಠ ಅಂಕಗಳಿಸಿದ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ PUCಗೆ (2 ವರ್ಷ) ಉಚಿತ ಸೀಟ್ ನೀಡಲು ವಿದ್ಯಾ ಸಂಸ್ಥೆಗಳು ಮುಂದೆ ಬಂದಿವೆ.
I. THE YENEPOYA P.U COLLEGE, JEPPINAMOGERU, MANGALORE.
1) ಪ್ರತೀ ವಿದ್ಯಾ ಸಂಸ್ಥೆಯಲ್ಲಿ ಶೇ. 90ಕ್ಕೂ ಮೀರಿ ಅಂಕ ಪಡೆದ ಓರ್ವ ವಿದ್ಯಾರ್ಥಿಗೆ PUC (Science & Commerce) ಉಚಿತ ಸೀಟ್.
2) ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ಉಚಿತ ಸೀಟಿನೊಂದಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನು ಒದಗಿಸಲಿದ್ದಾರೆ (ಒಟ್ಟು ಗರಿಷ್ಠ 5 ಸೀಟ್).
3) ಸೀಟ್ ಪಡೆದ ವಿದ್ಯಾರ್ಥಿಗಳಿಗೆ NEET, JEE, CET, CUET ಮತ್ತು CA ಯಲ್ಲಿ ಉಚಿತ ತರಬೇತಿ ಒಳಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9663989721, 9164984444
II. BARAKAH INTERNATIONAL SCHOOL AND COLLEGE ADYAR
1. ಪ್ರತೀ ಶಾಲೆಯ ಓರ್ವ ಟಾಪರ್ (90% ಕ್ಕೂ ಮೀರಿ ಅಂಕ ಗಳಿಸಿದ) ಮತ್ತು ಅನಾಥ ಬಡ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಉಚಿತ ಸೀಟ್. ಇತರ ಬಡ ಮಕ್ಕಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇದೆ.
2. Distinction ಪಡೆದ ವಿದ್ಯಾರ್ಥಿಗಳಿಗೆ ಅವರ ಅಂಕಗಳ ಆಧಾರದಲ್ಲಿ ವಿಶೇಷ ರಿಯಾಯಿತಿ ಇದೆ.
3. Hafiz/Hafiza ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9108243155, 9611903137
III. MISBAH WOMENS COLLEGE KATIPALLA
SSLC ಪರೀಕ್ಷೆಯಲ್ಲಿ ಶೇ.90ಕ್ಕೂ ಮೀರಿ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಧಾರ್ಮಿಕ ಶಿಕ್ಷಣದೊಂದಿಗೆ PUC ಯಲ್ಲಿ ಉಚಿತ ಸೀಟ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 98861 83274
IV. AL IHSAN EDUCATIONAL INSTITUTIONS MULOOR
SSLC ಯಲ್ಲಿ ಶೇ. 95ಕ್ಕೂ ಮೀರಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಸೀಟ್. ಅಲ್ಲದೆ ಅನಾಥ ಮತ್ತು ಬಡ ವಿದ್ಯಾರ್ಥಿಗಳಿಗೆ (ಮಾರ್ಕಿನ ಮಿತಿ ಇಲ್ಲ) ಊಟ ವಸತಿಯೊಂದಿಗೆ ಉಚಿತ ಸೀಟ್.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9845413529, 7619467805
V. AL FURQAN ISLAMIC P.U COLLEGE PUTHIGE, MOODBIDRE
ಪ್ರತೀ ಶಾಲೆಯ ಶೇ. 90ಕ್ಕೂ ಮೀರಿ ಅಂಕ ಪಡೆದ ಓರ್ವ ವಿದ್ಯಾರ್ಥಿಗೆ (ಅನಾಥ ವಿದ್ಯಾರ್ಥಿಗಳು ಸೇರಿ) ಉಚಿತ ಸೀಟ್ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 87220 38664
VI. KUNIL GIRLS P.U COLLEGE (Powered by Motivitalz) Natekal, Deralakatte
1. SSLC ಯಲ್ಲಿ ಗರಿಷ್ಠ ಅಂಕಗಳಿಸಿದ 3 ವಿದ್ಯಾರ್ಥಿಗಳಿಗೆ ಉಚಿತ ಸೀಟು.
2. ಅನಾಥ ಮತ್ತು ಬಡ ವಿದ್ಯಾರ್ಥಿಗಳಿಗೆ ಈ ವಿದ್ಯಾಸಂಸ್ಥೆಯಲ್ಲಿ ಉಚಿತ 10 ಸೀಟುಗಳನ್ನು ಕಾಯ್ದಿರಿಸಲಾಗಿದೆ.
3. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇದೆ.
4. ಈ ಸೌಲಭ್ಯವು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೂ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9747558645
VII. HIRA WOMENS PU COLLEGE BABBUKATTE
1) SSLC ಯಲ್ಲಿ 95% ಮಿಕ್ಕಿ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತ ಸೀಟು.
2) ಉತ್ತಮ ಅಂಕ ಪಡೆದ ಇತರ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 74836 68672
VIII. AYSHA GIRLS P.U COLLEGE RAMAKUNJA ATHOOR
ಪ್ರತೀ ಶಾಲೆಯ ಶೇ. 95ಕ್ಕೂ ಮೀರಿ ಅಂಕ ಪಡೆದ ಓರ್ವ ವಿದ್ಯಾರ್ಥಿಗೆ ಉಚಿತ ಸೀಟ್ ಲಭ್ಯವಿದೆ.
ಸೂಚನೆ:
1. ಈ ವಿದ್ಯಾಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇರುವುದು.
2. ಪ್ರತೀ ಶಾಲೆಯ ಟಾಪರ್‌ನ ಮಾರ್ಕ್ಸ್ ಕಾರ್ಡಿಗೆ MEIF ಕಚೇರಿಯಲ್ಲಿ ಕೌಂಟರ್ ಸೈನ್ ಮಾಡಿಸುವುದು.
3. ಆಯಾ ವಿದ್ಯಾ ಸಂಸ್ಥೆಯ ಆಸುಪಾಸಿನಲ್ಲಿರುವ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದ್ರಿ ಸಂಸ್ಥೆಯಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ MEIF ಕಚೇರಿಯ ಹೆಲ್ಪ್ ಡೆಸ್ಕ್ (8792115666) ಅನ್ನು ಸಂಪರ್ಕಿಸಬಹುದು ಎಂದು ಅಧ್ಯಕ್ಷರಾದ ಮೂಸಬ್ಬ ಪಿ ಬ್ಯಾರಿ ಮತ್ತು ಪ್ರಧಾನ ಕಾರ್ಯದರ್ಶಿ ಬಿ ಎ ನಝೀರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.