ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿ ಹೆಚ್ಚುವರಿ ಎಸಿ ಕೋಚ್
Update: 2023-05-31 16:27 GMT
ಮಂಗಳೂರು: ಪ್ರಯಾಣಿಕರ ನೂಕುನುಗ್ಗಲು ನಿವಾರಿಸಲು ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತದೆ.
ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 16603 ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿ ಜೂ.1ರಿಂದ 4ರ ತನಕ (4 ದಿನಗಳವರೆಗೆ) ಹೆಚ್ಚುವರಿ ಎಸಿ 3-ಟೈರ್ ಕೋಚ್ ಅಳವಡಿಸಲಾಗುತ್ತದೆ.
ಜೂನ್ 2ರಿಂದ 5ರ ತನಕ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 16604 ತಿರುವನಂತಪುರಂ ಸೆಂಟ್ರಲ್ - ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಹೆಚ್ಚುವರಿ ಎಸಿ 3-ಟೈರ್ ಕೋಚ್ ಒದಗಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.