19ನೇ ವರ್ಷದ ಸಂಭ್ರಮದಲ್ಲಿ ದಾರುಲ್ ಇಲ್ಮ್ ಮದ್ರಸ
Update: 2023-05-31 16:55 GMT
ಮಂಗಳೂರು, ಮೇ 21: ದಾರುಲ್ ಇಲ್ಮ್ ಮದ್ರಸ 2006ರಲ್ಲಿ ಸ್ಥಾಪನೆಗೊಂಡು ಈಗ ತನ್ನ 19ನೇ ವರ್ಷಕ್ಕೆ ಕಾಲಿಟ್ಟಿದೆ.
ಕರಾವಳಿ ಕರ್ನಾಟಕದ ಪ್ರಥಮ ಇಂಗ್ಲಿಷ್ ಮತ್ತು ಅರಬಿ ಮಾಧ್ಯಮ ಮದ್ರಸ ಎಂಬ ಹೆಗ್ಗಳಿಕೆ ಇರುವ ದಾರುಲ್ ಇಲ್ಮ್ ಮದ್ರಸದಲ್ಲಿ ಅರಬಿ ಭಾಷೆಯನ್ನು ಕಲಿಸಲಾಗುತ್ತದೆ. ಅದರ ಜತೆ ಧರ್ಮಶಾಸ್ತ್ರ ಮತ್ತು ಕರ್ಮ ಶಾಸ್ತ್ರದ ಸಮಗ್ರ ಶಿಕ್ಷಣವನ್ನು ನೀಡಲಾಗುತ್ತದೆ.
ಕುರ್ ಆನ್, ತಜ್ವೀದ್ , ಹದೀಸ್, ಸೀರತ್, ಹಿಪ್ಸ್, ದೀನಿಯಾತ್, ತಫ್ಸೀರ್, ಫಿಕ್ಹ್ , ಅರಬಿ ಭಾಷೆ , ಇಸ್ಲಾಮಿ ಜ್ಞಾನ ಸಹಿತ ಒಟ್ಟು ಒಂಬತ್ತು ವಿಷಯಗಳನ್ನು ಕಲಿಸಲಾಗುತ್ತದೆ. ಮಕ್ಕಳ ದಾಖಲಾತಿ ಮಾಡ ಬಯಸುವವರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.
ದಾರುಲ್ ಇಲ್ಮ್ ಮದರಸ, ಲುಲು ಸೆಂಟರ್, ಇಂದಿರಾ ಆಸ್ಪತ್ರೆ ಬಳಿ, ಫಳ್ನೀರ್ ಮಂಗಳೂರು. 2, 9845209449 ಮೊ. ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಸ್ಥಾಪಕರು ಮತ್ತು ಪ್ರಾಂಶುಪಾಲ ರಫೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.