ಮುರುಡೇಶ್ವರ: ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ವಿದ್ಯಾರ್ಥಿ ಮೃತ್ಯು

Update: 2023-06-13 13:32 GMT

ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಸಮುದ್ರದಲೆಗೆ ಸಿಲುಕಿ ಸಾವನ್ನಪ್ಪಿದ್ದು, ಇಬ್ಬರನ್ನು ಸ್ಥಳಿಯ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ  ಘಟನೆ ಮಂಗಳವಾರ ಮುರುಡೇಶ್ವರದಲ್ಲಿ ನಡೆದಿದೆ.

ಮೃತರನ್ನು ಬೆಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಪವನ್ ನಾಯ್ಕ (20) ಎಂದು ಗುರುತಿಲಾಗಿದೆ. 

ಆರು ಜನ ಸ್ನೇಹಿತರೊಂದಿಗೆ ಮುರುಡೇಶ್ವರಕ್ಕೆ ಪ್ರವಾಸ ಬಂದಿದ್ದ ಪವನ್ ಹಾಗೂ ಮತ್ತಿಬ್ಬರು ಮಂಗಳವಾರ ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಈ ಸಂದರ್ಭ ಕಡಲ ಅಲೆಗಳ ಅಬ್ಬರ ಜೋರಾಗಿದ್ದು ಪವನ್ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು ಜೀವ ರಕ್ಷಕ ಸಿಬ್ಬಂದಿ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾಗಿ ತಿಳಿದುಬಂದಿದೆ.

ಸೋಮವಾರ ಇದೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಈ ನಡುವೆ ಮತ್ತೊಂದು ದುರ್ಘಟನೆ ಸಂಭವಿಸಿದೆ.

ಬಿಫರ್‌ಜೊಯೆ ಚಂಡ ಮಾರುತದ ಪರಿಣಾಮ ಕರಾವಳಿ ಸಮದ್ರ ತೀರ ಪ್ರಕ್ಷುಬ್ದಗೊಂಡಿದ್ದು ಈ ನಡುವೆ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ಸಮುದ್ರಕ್ಕಿಳಿಯುತ್ತಾರೆ. ಸ್ಥಳೀಯ ಆಡಳಿತ ಹಾಗೂ ಜೀವರಕ್ಷಕ ಸಿಬ್ಬಂದಿಗಳ ಎಚ್ಚರಿಕೆಯ ನಡುವೆಯೂ ಅವಘಡಗಳು ಸಂಭವಿಸುತ್ತವೆ.

ಮುರುಡೇಶ್ವರ ಕಡಲತೀರದಲ್ಲಿ ಪದೇ ಪದೇ ನಡೆಯುತ್ತಿರುವ ಈ ದುರಂತ ತಪ್ಪಿಸಬೇಕು ಎಂದಾದರೆ ಕಡಲತೀರಕ್ಕೆ ಹೋಗುವುದನ್ನು ನಿಷೇಧಿಸಬೇಕು. ಮಳೆಗಾಲ ಮುಗಿಯುವ ವರೆಗೆ ಸಮುದ್ರ ತಲುಪುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಬೇಕು. ಹೇಗೆ ಮಾಡಿದರೆ ಅನಾಹುತಗಳನ್ನು ತಪ್ಪಿಸಬಹುದು ಎಂದು ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Similar News