ಭಟ್ಕಳ: ಹತ್ತು ಮಂದಿಯ ಮೇಲೆ ಬೀದಿ ನಾಯಿ ದಾಳಿ

Update: 2023-06-20 16:21 GMT

ಭಟ್ಕಳ: ಭಟ್ಕಳದಲ್ಲಿ ಮಂಗಳವಾರ ಬೀದಿ ನಾಯಿಗಳು ದಾರಿಹೋಕರ ಮೇಲೆ ದಾಳಿ ನಡೆಸಿದ್ದು ಒಂದೇ ದಿನದಲ್ಲಿ ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ.

ಮದೀನಾ ಕಾಲನಿಯಲ್ಲಿ ಹುಚ್ಚು ನಾಯಿಯೊಂದು ಐದು ಜನರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದ್ದು ಇದು ಹುಚ್ಚು ನಾಯಿನೋ ಅಥವಾ ಬೀದಿ ನಾಯಿನೋ ಎಂಬುದರ ಕುರಿತು ಸರಿಯಾದ ಮಾಹಿತಿ ಲಭ್ಯವಿಲ್ಲ. ಅಲ್ಲದೆ ಹೆಬಳೆ ಪಂಚಾಯತ್ ವ್ಯಾಪ್ತಿಯ 2, ಹಡೀನ್ ನಲ್ಲಿ 1, ಸರ್ಪನಕಟ್ಟೆಯಲ್ಲಿ 1 ಹಾಗೂ ಬದ್ರಿಯಾ ಕಾಲನಿಯಲ್ಲಿ 1 ಮಂದಿಗೆ ನಾಯಿ ದಾಳಿ ಮಾಡಿದೆ.

ನಾಯಿ ದಾಳಿಗೆ ಒಳಗಾದವರನ್ನು ಜೀವನ್ ನಾಯ್ಕ, ಮುಹಮ್ಮದ್ ಇದ್ರೀಸ್, ಫಿರ್ದೊಸ್ ಬಾನು, ಮುಹಮ್ಮದ್ ಫಾರೂಖ್, ಫರಿದಾ ಬಾನು ಜಾಲಿ, ಕೌಸರ್ ಮದೀನಾ ಕಾಲನಿ, ಮುಹಮ್ಮದ್ ಇರ್ಷಾದ್, ಮುಹಮ್ಮದ್ ಅನ್ಸಾರ್, ಅಂಜುಮ್ ಎಂದು ಗುರುತಿಸಲಾಗಿದೆ.

Similar News