ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಸಾಕ್ಷ್ಯ ನಾಶಕ್ಕೆ ಹಣ ಸಾಲ ಪಡೆದಿದ್ದ ನಟ ದರ್ಶನ್ : ವರದಿ

Update: 2024-06-21 15:46 GMT

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯನಾಶ ಹಾಗೂ ಪಾರಾಗಲು ನಟ ದರ್ಶನ್ ಆಪ್ತರೊಬ್ಬರಿಂದ ಲಕ್ಷಾಂತರ ರೂ.ಹಣವನ್ನು ಪಡೆದಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದ ವರದಿಯಾಗಿದೆ.

ನಟ ದರ್ಶನ್ ಆಪ್ತ ಸ್ನೇಹಿತ ಮೋಹನ್ ರಾಜ್ ಎಂಬವರು 40 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ನೀಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಹತ್ಯೆ ಪ್ರಕರಣದಲ್ಲಿ ಮುಂದೆ ಸಂಕಷ್ಟ ಎದುರಾದರೆ, ಯಾವುದೇ ರೀತಿಯ ತಮ್ಮ ವಿರುದ್ಧ ಸಾಕ್ಷ್ಯಗಳು ಇರಬಾರದು ಎಂಬ ಕಾರಣಕ್ಕೆ ಇತರ ಆರೋಪಿಗಳನ್ನು ಒಪ್ಪಿಸಲು ಹಣ ಪಡೆದಿದ್ದರು. ಆ ಹಣದ ಹೊರಗೆ ಜೂ.19ರಂದು ಆರ್.ಆರ್.ನಗರದ ದರ್ಶನ್ ಮನೆಯಲ್ಲಿ ಶೋಧ ನಡೆಸಿದಾಗ 37.40 ಲಕ್ಷ ರೂ. ಜಪ್ತಿ ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ದರ್ಶನ್ ನೀಡಿದ್ದ 3 ಲಕ್ಷ ರೂ. ಹಣ ಹಾಗೂ ವಸ್ತುಗಳನ್ನು ಅವರ ಪತ್ನಿ ವಿಜಯಲಕ್ಷ್ಮೀ ಅವರು ತನಿಖಾ ತಂಡಕ್ಕೆ ತಂದುಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಲ್ವರ ತೀವ್ರ ವಿಚಾರಣೆ: ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಕಸ್ಟಡಿಗೆ ಪಡೆದ ನಾಲ್ವರನ್ನು ವಿಜಯನಗರ ಉಪವಿಭಾಗದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಪ್ರಮುಖ ಆರೋಪಿ ದರ್ಶನ್ ಮನೆಯಿಂದ ವಶಪಡಿಸಿಕೊಂಡ 37.40 ಲಕ್ಷ ರೂ.ನಗದು ಹಾಗೂ ಆರೋಪಿಯು ತನ್ನ ಪತ್ನಿಗೆ ನೀಡಿದ್ದ 3 ಲಕ್ಷ ರೂ.ಗಳ ಹಣದ ಬಗ್ಗೆ ತನಿಖೆ ನಡೆಸಿದ ಮೂಲಗಳು ತಿಳಿಸಿವೆ.

ಉಳಿದಂತೆ ಇತರ ಮೂವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ, ಕೊಲೆಯಾದ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲಾಯಿತು ಬಳಸಲಾದ ಮೆಗ್ಗರ್ ಸಾಧನ ಎಲ್ಲಿಂದ ಖರೀದಿಸಲಾಗಿದೆ ಎಂದು ಆರೋಪಿ ಧನರಾಜ್ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಆರೋಪಿ ವಿನಯ್ ಮೊಬೈಲ್‌ಗೆ ಕಳಿಸಿರುವ ಮಹತ್ವದ ವೀಡಿಯೋ ಕುರಿತಾಗಿ ಹಾಗೂ ರೇಣುಕಾಸ್ವಾಮಿ ಮೊಬೈಲ್ ಹಾಗೂ ಆರೋಪಿ ರಾಘವೇಂದ್ರ ಮೊಬೈಲ್ ಅವರನ್ನು ರಾಜಕಾಲುವೆಗೆ ಕರೆದೊಯ್ದಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಆರೋಪಿ ಪ್ರದೂಷ್‌ನಿಂದ ಪತ್ತೆಯಾದ ಮಾಹಿತಿ ಪಡೆದಿರುವ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News