ಯೂಟ್ಯೂಬ್ ನೋಡಿಕೊಂಡು ಸ್ವಯಂ ಹೆರಿಗೆ ; ಮಗುವಿನ ಹತ್ಯೆ ಮಾಡಿದ ಪ್ರೇಮಿಗಳ ಬಂಧನ

Update: 2025-03-25 11:24 IST
ಯೂಟ್ಯೂಬ್ ನೋಡಿಕೊಂಡು ಸ್ವಯಂ ಹೆರಿಗೆ ; ಮಗುವಿನ ಹತ್ಯೆ ಮಾಡಿದ ಪ್ರೇಮಿಗಳ ಬಂಧನ
  • whatsapp icon

ಬೆಳಗಾವಿ: ರಾಜ್ಯದ ಅನೇಕ ಕಡೆಗಳಲ್ಲಿ ನವಜಾತ ಶಿಶುಗಳ ಪತ್ತೆ ಪ್ರಕರಣಗಳು ನಡೆಯುತ್ತವೆ. ಹೆತ್ತವರೇ ಅನೇಕ ಕಡೆಗಳಲ್ಲಿ ತಿಪ್ಪೆಗುಂಡಿ, ರಸ್ತೆ ಹಾಗೂ ನಿರ್ಜನ ಪ್ರದೇಶದಲ್ಲಿ ಶಿಶುಗಳನ್ನು ಬಿಸಾಡಿರುವ ಘಟನೆಗಳೂ ನಡೆದಿವೆ. ಈ ಮಧ್ಯೆ ಕಿತ್ತೂರು ತಾಲೂಕಿನ ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಹೆತ್ತ ಮಗುವನ್ನೇ ಹತ್ಯೆ ಮಾಡಿದ ಪ್ರಕರಣ ಪತ್ತೆ ಮಾಡಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಂಬಡಗಟ್ಟಿಯ ಮಹಾಬಲೇಶ್ವರ ರುದ್ರಪ್ಪ ಕಾಮೋಜಿ (31) ಹಾಗೂ ಸಿಮ್ರನ್ ಮೌಲಾಸಾಬ್ ಮಾಣಿಕಬಾಯಿ (22) ಎಂದು ಗುರುತಿಸಲಾಗಿದೆ. ಮಾ.5ರಂದು ಅಂಬಡಗಟ್ಟಿಯ ಮನೆಯೊಂದರ ಹಿತ್ತಲಿನ ತಿಪ್ಪೆಗುಂಡಿಯಲ್ಲಿ ಮಗವಿನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣ ಭೇದಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಅಂಬಡಗಟ್ಟಿಯ ಮಹಾಬಲೇಶ್ವರ ಹಾಗೂ ಸಿಮ್ರನ್‌ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಹಾಬಲೇಶ್ವರನ ಜೊತೆ ಸಲುಗೆಯಿಂದ ಸಿಮ್ರನ್‌ ಗರ್ಭಿಣಿಯಾಗಿದ್ದಳು. ಸಿಮ್ರನ್‌ ದಪ್ಪ ಇದ್ದ ಕಾರಣ ಗರ್ಭಿಣಿಯಾದ ವಿಷಯ ಮನೆಯವರಿಗೆ ಗೊತ್ತಾಗಿರಲಿಲ್ಲ. 9 ತಿಂಗಳ ಬಳಿಕ ಮಾ.5ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಾತ್‌ರೂಮ್‌ನಲ್ಲಿ ಹೋಗಿ ಸಿಮ್ರನ್‌ ಸ್ವಯಂ ಹೆರಿಗೆ ಮಾಡಿಕೊಂಡು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಸಂದರ್ಭದಲ್ಲಿ ಪ್ರಿಯಕರ ಮಹಾಬಲೇಶ್ವರ ಕೂಡ ವಿಡಿಯೊ ಕಾಲ್‌ನಲ್ಲಿ ಮಾರ್ಗದರ್ಶನ ಮಾಡಿದ್ದ. ಅಲ್ಲದೆ, ಹೆರಿಗೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಸಿಮ್ರನ್‌ ಯ್ಯೂಟೂಬ್‌ನಲ್ಲಿ ನೋಡಿದ್ದಳು. ಹೆರಿಗೆಯಾದ ಬಳಿಕ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಗುವನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ತಿಪ್ಪೆಗುಂಡಿಯಲ್ಲಿ ಬಿಸಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News