ಸುಪ್ರೀಂ ಕೋರ್ಟ್ | ಬುಲ್ಡೋಝರ್ ಕಾರ್ಯಾಚರಣೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಕೋರಿದ್ದ ಪಿಐಎಲ್ ವಜಾ

Update: 2024-10-24 07:36 GMT

ಸುಪ್ರೀಂ ಕೋರ್ಟ್ |  PTI 

ಹೊಸದಿಲ್ಲಿ : ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ ರಾಜ್ಯಗಳಲ್ಲಿ ನಡೆಯುತ್ತಿರುವ ಬುಲ್ಡೋಝರ್ ಕಾರ್ಯಾಚರಣೆ ಉಲ್ಲೇಖಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಗವಾಯಿ ಜೆ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. “ನೀವು ಮೂರನೇ ವ್ಯಕ್ತಿ. ನಿಮ್ಮ ದೂರು ಏನು? ಸಂತ್ರಸ್ತರು ನ್ಯಾಯಾಲಯದ ಮುಂದೆ ಬರಲಿ. ನಾವು ವಿಚಾರಣೆ ಮಾಡುತ್ತೇವೆ. ಇದು ಅರ್ಜಿಗಳಿಗೆ ಅವಕಾಶ ನೀಡಲಿದೆ” ಎಂದು ನ್ಯಾಯಾಧೀಶರು ಅರ್ಜಿದಾರರಿಗೆ ಸೂಚಿಸಿದರು. ರಾಷ್ಟ್ರೀಯ ಮಹಿಳಾ ಒಕ್ಕೂಟವು ಪಿಐಎಲ್ ಸಲ್ಲಿಸಿತ್ತು.

ಇದು ಪ್ರಾಮಾಣಿಕ ಪಿಐಎಲ್ ಆಗಿದೆ ಮತ್ತು ನ್ಯಾಯಾಲಯವು ಈ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ಮಾಡಬಹುದು ಎಂದು ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಪ್ರತ್ಯೇಕ ಪ್ರಕರಣವು ಈಗಾಗಲೇ ನಡೆಯುತ್ತಿರುವುದೆ. ಅಲ್ಲದೇ, ಅರ್ಜಿದಾರರಿಗೆ ಯಾವುದೇ ತೊಂದರೆಯಾಗದ ಕಾರಣ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡುವುದಿಲ್ಲ ಎಂದು ಗವಾಯಿ ಜೆ ಅವರಿದ್ದ ಪೀಠ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News