ಚಿಕ್ಕಮಗಳೂರು: ಮುಖ್ಯವಾಹಿನಿಯತ್ತ ಮತ್ತೋರ್ವ ನಕ್ಸಲ್?

Update: 2025-01-28 12:52 IST
ಚಿಕ್ಕಮಗಳೂರು: ಮುಖ್ಯವಾಹಿನಿಯತ್ತ ಮತ್ತೋರ್ವ ನಕ್ಸಲ್?
  • ರವೀಂದ್ರ
  • whatsapp icon

ಚಿಕ್ಕಮಗಳೂರು: ಜಿಲ್ಲೆಯ ಮತ್ತೋರ್ವ ನಕ್ಸಲ್ ಶರಣಾಗತಿಗೆ ಮುಂದಾಗಿದ್ದಾರೆನ್ನಲಾಗಿದ್ದು, ಈ ಬಗ್ಗೆ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ಆತ ಸಂಪರ್ಕಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ನಕ್ಸಲ್ ರವೀಂದ್ರ ಶರಣಾಗತಿಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ರವೀಂದ್ರ ಸಂಪರ್ಕಿಸಿದ್ದು, ಇನ್ನೊಂದು ವಾರದಲ್ಲಿ ಶರಣಾಗತಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜನವರಿ 8ರಂದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಿದ್ದರು. ಈ ಮಧ್ಯೆ ನಕ್ಸಲ್ ರವೀಂದ್ರ ಕೇರಳ ಅಥವಾ ತಮಿಳುನಾಡಿಗೆ ಪರಾರಿಯಾಗಿರುವ ವದಂತಿ ಹಬ್ಬಿತ್ತು.

ಶರಣಗತರಾದ ನಕ್ಸಲರ ಸಂಪರ್ಕದಿಂದ ದೂರವಾಗಿದ್ದ ರವೀಂದ್ರ, ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ನಕ್ಸಲ್ ಪುನರ್ವಸತಿ ಸಮಿತಿ ಮುಖಂಡರಿಗೆ ಸಿಗದ ಪರಿಣಾಮ ಶರಣಾಗತಿ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ ರವೀಂದ್ರ ಅವರು ಶಾಂತಿಗಾಗಿ ನಾಗರಿಕರ ವೇದಿಕೆಯ ಸದಸ್ಯರ ಸಂಪರ್ಕಕ್ಕೆ ಬಂದಿದ್ದು, ಮುಖ್ಯವಾಹಿನಿಗೆ ಬರಲು ಇಚ್ಛಿಸಿದ್ದಾರೆನ್ನಲಾಗಿದೆ. ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ರವೀಂದ್ರ ಮುಖ್ಯವಾಹಿನಿಗೆ ಬಂದಲ್ಲಿ ರಾಜ್ಯದಲ್ಲಿ ಎರಡು ದಶಕಗಳ ನಕ್ಸಲ್ ಚಳವಳಿ ಅಂತ್ಯಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News