ಚಿಕ್ಕಮಗಳೂರು | ಎಟಿಎಂನಲ್ಲಿ ಬೆಂಕಿ ಆಕಸ್ಮಿಕ: ಐದು ಲಕ್ಷ ರೂ. ಬೆಂಕಿಗಾಹುತಿ
Update: 2024-04-22 11:23 IST

ಚಿಕ್ಕಮಗಳೂರು, ಎ.22: ನಗರದ ಎಟಿಎಂ ಒಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಅದರೊಳಗಿದ್ದ ಐದು ಲಕ್ಷ ರೂ. ಬೆಂಕಿಗೆ ಆಹುತಿಯಾಗಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.
ನಗರ ಐ.ಜಿ.ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ಈ ಅವಘಡ ಸಂಭವಿಸಿದೆ.
ಎಟಿಎಂ ಕೊಠಡಿಯಲ್ಲಿ ಅಳವಡಿಸಿರುವ ಎ.ಸಿ.ಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.
ಬೆಂಕಿ ಇಡೀ ಎಟಿಎಂ ಅನ್ನು ಆವರಿಸಿದ್ದು ಎಟಿಎಂನೊಳಗಿದ್ದ ಐದು ಲಕ್ಷ ರೂ. ಸುಟ್ಟು ಕರಕಲಾಗಿದೆ. ಎಟಿಎಂ ಕೊಠಡಿಯಲ್ಲಿದ್ದ ಹಣ ತುಂಬುವ ಮೆಷಿನ್ ಹಾಗೂ ಎಟಿಎಂ ಮೆಷಿನ್ ಸುಟ್ಟು ಹೋಗಿದೆ.
ವಿಷಯ ತಿಳಿಯುತ್ತಿದ್ದಂತೆ ಆಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಎಟಿಎಂ ಕೊಠಡಿ ಮೇಲ್ಬಾಗದಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ ಇದ್ದು ದೊಡ್ಡ ಅನಾಹುತ ತಪ್ಪಿದೆ.

