ಚಿಕ್ಕಮಗಳೂರು | ಮಂಗನ ಕಾಯಿಲೆಗೆ ವೃದ್ದೆ ಬಲಿ

Update: 2025-03-17 10:10 IST
ಚಿಕ್ಕಮಗಳೂರು | ಮಂಗನ ಕಾಯಿಲೆಗೆ ವೃದ್ದೆ ಬಲಿ
  • whatsapp icon

ಚಿಕ್ಕಮಗಳೂರು : ಮಂಗನ ಕಾಯಿಲೆಗೆ ತುತ್ತಾಗಿದ್ದ 65 ವರ್ಷದ ವೃದ್ದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಮಂಗನ ಕಾಯಿಲೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದೆ.

ನರಸಿಂಹರಾಜಪುರ ತಾಲೂಕು ಕಟ್ಟಿನಮನೆ ಗ್ರಾಮದ ವೃದ್ದೆ ಮಂಗನ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತಾಯಿ ಮತ್ತು ಮಗ ಮೇಲ್ಪಾಲ್ ಗ್ರಾಮದ ಕಾಫಿತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಮಹಿಳೆಗೆ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದಂತೆ ಚಿಕಿತ್ಸೆಗೆ ಕೊಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು, ಮಂಗನ ಕಾಯಿಲೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇದ್ದ ಹಿನ್ನಲೆ ಹೆಚ್ಚಿನ‌ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಡಿದ್ದಾರೆ ಎಂದು ತಿಳಿದು ಬಂದಿದೆ.

ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಈ ವರ್ಷ ಮೊದಲ ಬಲಿ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News