ಚಿಕ್ಕಮಗಳೂರು: ಇಂದು ನಕ್ಸಲ್ ರವೀಂದ್ರ ಶರಣಾಗತಿ

ಚಿಕ್ಕಮಗಳೂರು: ಶರಣಾಗದೆ ಉಳಿದಿದ್ದ ನಕ್ಸಲ್ ರವೀಂದ್ರ (ರವಿ) ಇಂದು(ಫೆ.1) ಮಧ್ಯಾಹ್ನ 12 ಗಂಟೆ ವೇಳೆಗೆ ಜಿಲ್ಲಾಡಳಿತದ ಮುಂದೇ ಶರಣಾಗಲಿದ್ದಾನೆಂದು ಖಚಿತ ಮೂಲಗಳು ತಿಳಿಸಿವೆ.
ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ರವೀಂದ್ರನ ಜತೆ ಮಾತುಕತೆ ನಡೆಸಿ ಆತನ ಮನವೊಲಿಸಿದ್ದು, ಶರಣಾಗತಿಗೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.
ಜ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಸಮ್ಮುಖದಲ್ಲಿ ಆರು ಜನ ನಕ್ಸಲರು ಶರಣಾಗಿದ್ದರು. ಆದರೆ, ರವೀಂದ್ರ ಮಾತ್ರ ಶರಣಾಗಿರಲಿಲ್ಲ.
ಶೃಂಗೇರಿ ತಾಲೂಕು ಕಿಗ್ಗಾ ಸಮೀಪದ ಕೋಟೆಹೊಂಡ ಮರಾಠಿ ಕಾಲನಿಯ ರವೀಂದ್ರನ ಸಂಪರ್ಕಕ್ಕಾಗಿ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ಸಂಪರ್ಕಕ್ಕಾಗಿ ಶ್ರಮಿಸಿದ್ದರು. ಆದರೆ ಅವರ ಸುಳಿವು ಸಿಕ್ಕಿರಲಿಲ್ಲ.
ಕೆಲ ದಿನಗಳ ಹಿಂದೆ ರವೀಂದ್ರ ವೇದಿಕೆಯ ಸಂಪರ್ಕಕ್ಕೆ ಸಿಕ್ಕಿದ್ದು, ಆತನೊಂದಿಗೆ ಚರ್ಚಿಸಿದ ಬಳಿದ ಶರಣಾಗತಿಗೆ ಒಪ್ಪಿಗೆ ಸೂಚಿಸಿದ್ದಾನೆ ಅದರಂತೆ ಇಂದು ಜಿಲ್ಲಾಡಳಿದ ಮುಂದೇ ಶರಣಾಗಲಿದ್ದಾನೆ. ಇದರೊಂದಿಗೆ ರಾಜ್ಯ ನಕ್ಸಲ್ ಮುಕ್ತ ರಾಜ್ಯವಾಗಲಿದೆ.