ಚಿಕ್ಕಮಗಳೂರು | ಗಾಂಜಾ ಸಾಗಾಟ; ಇಬ್ಬರ ಬಂಧನ, 10 ಕೆ.ಜಿ. ಮಾಲು ವಶ

Update: 2025-01-29 20:36 IST
ಚಿಕ್ಕಮಗಳೂರು | ಗಾಂಜಾ ಸಾಗಾಟ; ಇಬ್ಬರ ಬಂಧನ, 10 ಕೆ.ಜಿ. ಮಾಲು ವಶ

ಸಾಂದರ್ಭಿಕ ಚಿತ್ರ

  • whatsapp icon

ಚಿಕ್ಕಮಗಳೂರು : ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಎರಡು ಲಕ್ಷ ರೂ. ಮೌಲ್ಯದ 10.4 ಕೆ.ಜಿ.ಗಾಂಜಾ, ಸ್ಕೂಟಿ ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ನಗರದ ಸಂತೆ ಮೈದಾನ ತಮಿಳು ಕಾಲನಿಯ ವಸೀಂ ಪಾಷಾ ಹಾಗೂ ನಾಝೀಮಾ ಅವರನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ಸಿಇಎನ್ ಅಪರಾಧ ಪೊಲೀಸ್ ಠಾಣಾ ಒಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ದೀಪಾ ನರ್ಸಿಂಗ್ ಹೋಮ್‍ನಿಂದ ಬೈಪಾಸ್ ರಸ್ತೆಗೆ ಹೋಗುವ ದಂಟರಮಕ್ಕಿ ಕ್ರಾಸ್‍ನಲ್ಲಿ ಇಬ್ಬರು ವ್ಯಕ್ತಿಗಳು ಸ್ಕೂಟಿಯಲ್ಲಿ ಗಾಂಜಾ ತರುತ್ತಿರುವ ವಿಷಯ ತಿಳಿದು ಕಾರ್ಯಪ್ರವೃತ್ತರಾದ ಪೊಲೀಸರು, ಸ್ಕೂಟಿಯನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ ಎರಡು ಲಕ್ಷ ರೂ. ಮೌಲ್ಯದ 10.4ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ ಸ್ಕೂಟಿ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News