ಭದ್ರಾ ಅಭಯಾರಣ್ಯ ಹಿನ್ನೀರಿನಲ್ಲಿ 15ಕ್ಕೂ ಹೆಚ್ಚು ಆನೆಗಳ ಹಿಂಡು; ಗ್ರಾಮಸ್ಥರಲ್ಲಿ ಆತಂಕ
Update: 2025-02-10 22:22 IST

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ಹಿನ್ನೀರಿನಲ್ಲಿ 15ಕ್ಕೂ ಹೆಚ್ಚು ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ನರಸಿಂಹರಾಜಪುರ ತಾಲೂಕು ವಿಠಲ ಗ್ರಾಮದ ಸಮೀಪದ ಭದ್ರಾ ಅಭಯಾರಣ್ಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.
ಭದ್ರಾ ಅಭಯಾರಣ್ಯದಿಂದ ಈ ಆನೆಗಳ ಹಿಂಡು ಬಂದಿರುವ ಸಾಧ್ಯತೆ ಇದ್ದು, ಆನೆಗಳು ನರಸಿಂಹರಾಜಪುರ ತಾಲೂಕಿನಲ್ಲಿ ಎರಡು ತಿಂಗಳಲ್ಲಿ ಮೂರು ಜನರನ್ನು ಬಲಿ ಪಡೆದುಕೊಂಡಿವೆ. ಕಳೆದ ಅನೇಕ ದಿನಗಳಿಂದ ಭದ್ರಾ ಹಿನ್ನೀರಿನಲ್ಲಿ ಆನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ಗಂಟೆಗಟ್ಟಲೇ ನದಿಯ ತೀರದಲ್ಲಿ ಸುತ್ತು ಹೊಡೆಯುತ್ತಿದ್ದು ಆನೆ ಹಿಂಡು ಕಂಡು ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದಾರೆ.