ದೇರಳಕಟ್ಟೆ| ನೇತಾಜಿ ಸುಭಾಷ್ ಚಂದ್ರಬೋಸ್ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಕೂಟ
ದೇರಳಕಟ್ಟೆ: ನೇತಾಜಿ ಸುಭಾಷ್ ಚಂದ್ರಬೋಸ್ ಪ್ರೌಢಶಾಲೆ ದೇರಳಕಟ್ಟೆಯಲ್ಲಿ 2013-14 ನೇ ಸಾಲಿನ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ರೀಯೂನಿಯನ್ ಸ್ನೇಹ ಕೂಟವು ಇತ್ತೀಚೆಗೆ ನಡೆಯಿತು.
ನೇತಾಜಿ ಸುಭಾಷ್ ಚಂದ್ರಬೋಸ್ ಪ್ರೌಢಶಾಲೆ ದೇರಳಕಟ್ಟೆ ಕಲಿತು ಸುಮಾರು ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಂದುಗೂಡಿದ ಸಹಪಾಠಿ ಮಿತ್ರರು ಪರಸ್ಪರ ನೆನಪುಗಳನ್ನು ಹಂಚಿಕೊಂಡರು.
SDMC ಅಧ್ಯಕ್ಷ ಇಸ್ಮಾಯಿಲ್ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಧ್ಯಾಯರಾದ ಬಾಬು ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಗಣಿತ ಶಿಕ್ಷಕಿ ನಯನ, ಹಿಂದಿ ಶಿಕ್ಷಕಿ ಶಾಂತ, ಕನ್ನಡ ಶಿಕ್ಷಕಿ ದೇವಕಿ, ಗಣಿತ ಶಿಕ್ಷಕಿ ಗಾಯತ್ರಿ, ಮೇಡಮ್ ನೆನಪುಗಳನ್ನು ಹಂಚಿಕೊಂಡು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧ್ಯಾಪಕರಿಗೆ ಗುರುವಂದನೆ ಮಾಡಲಾಯಿತು.
ಅಗಲಿದ ಗೆಳೆಯರಾದ ಪ್ರಕಾಶ್ ಪನೀರ್, ಫೈಝಲ್ ನಟೇಕಲ್, ಅಜ್ಮೀಯ ಮಂಜನಾಡಿ ಅವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಖಲೀಲ್ ದೇರಳಕಟ್ಟೆ, ಮನ್ಸೂರ್ ದೇರಳಕಟ್ಟೆ, ಸಫ್ವಾನ್ ಮಂಜನಾಡಿ, ಅಫೀಝ, ಸಾಬ್ರೀನ, ಸಫೀದ ಮತ್ತು ರುಕ್ಷಾನ ಅತಿಥಿತಿಗಳಿಗೆ ಕಿರುಕಾಣಿಕೆ ನೀಡಿದರು.
ನಂತರ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ನಡೆಯಿತು. ಹಳೆ ವಿದ್ಯಾರ್ಥಿಗಳ ವತಿಯಿಂದ ಶಾಲೆಗೆ ಕ್ರೀಡಾ ಸಾಮಗ್ರಿಗಳು ಉಡುಗೊರೆ ನೀಡಲಾಯಿತು.
ಹಳೆ ವಿದ್ಯಾರ್ಥಿನಿ ನೌಮೀನ ಮತ್ತು ನಿಷಾ ಅತಿಥಿಗಳನ್ನು ಸ್ವಾಗತಿಸಿದರು. ಉದ್ಯಮಿ ಉಮೈರ್ ಬೆಲ್ಮ ಕಾರ್ಯಕ್ರಮ ನಿರೂಪಿಸಿದರು.
ಅನಿವಾಸಿ ಹಳೆ ವಿದ್ಯಾರ್ಥಿಗಳಾದ ಆಮೀರ್ ಜುಬೈಲ್, ಸಂಶುದ್ದೀನ್ ಖೋಬಾರ್, ಹಾರೂನ್ ಜುಬೈಲ್ ರವರು ಶುಭ ಹಾರೈಸಿದರು.