ಬೆಂಗಳೂರು | ಅಪಘಾತದಲ್ಲಿ ಗಾಯಗೊಂಡಿದ್ದ ವೈದ್ಯಕೀಯ ವಿದ್ಯಾರ್ಥಿ ಮೃತ್ಯು
Update: 2025-04-06 19:31 IST

ಡಾ.ಮುಹಮ್ಮದ್ ಇಶಾಮ್
ಬೆಂಗಳೂರು : ಬೆಂಗಳೂರು ಹೆಗ್ಡೆ ನಗರ ನಿವಾಸಿ ಡಾ.ಮುಹಮ್ಮದ್ ಇಶಾಮ್ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿನ ಜಕ್ಕೂರು ಅಂಡರ್ ಪಾಸ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀರ್ವವಾಗಿ ಗಾಯಗೊಂಡಿದ್ದರು. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಬೆಂಗಳೂರಿನ ರಾಜೀವ್ ಗಾಂಧೀ ಡೆಂಟಲ್ ಆಸ್ಪತ್ರೆಯ ವಿದ್ಯಾರ್ಥಿಯಾಗಿದ್ದು, ಬಿ ಎ ಮುಹಮ್ಮದ್ ಮತ್ತು ರಿಝ್ವಾನ ಖುರೈಷಿ ದಂಪತಿಯ ಪುತ್ರರಾಗಿದ್ದಾರೆ.