ಸತೀಶ್ ಗಟ್ಟಿ ಧರ್ಮಕ್ಕಿ
Update: 2025-03-28 19:03 IST
ಕೊಣಾಜೆ : ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿಯವರ ಹಿರಿಯ ಸಹೋದರ, ಕೈರಂಗಳ ಗ್ರಾಮದ ಧರ್ಮಕ್ಕಿ ನಿವಾಸಿ ಸತೀಶ್ ಗಟ್ಟಿ (53)ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.
ಕಾಂಗ್ರೆಸ್ ಮುಖಂಡ ದಿ. ಸಂಜೀವ ಗಟ್ಟಿ ಹಾಗೂ ಶಾರದಾ ಗಟ್ಟಿ ದಂಪತಿ ಪುತ್ರರಾಗಿದ್ದು ಬೆಂಗಳೂರಿನಲ್ಲಿ ಯುವ ಉದ್ಯಮಿ ಆಗಿದ್ದ ಸತೀಶ್ ಗಟ್ಟಿ ಕೆಲವು ವರ್ಷ ಬೆಂಗಳೂರಿನಲ್ಲಿದ್ದು ಉದ್ಯಮ ನಡೆಸುತ್ತಿದ್ದರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿದ್ದು ಯಕ್ಷಗಾನ, ನಾಟಕ ಹಾಗೂ ಕ್ರೀಡಾಕೂಟಗಳನ್ನು ಸಂಘಟಿಸಿದ್ದರು.
ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ವಿಧಾನ ಸಭೆಯ ಸ್ಪೀಕರ್ ಯು. ಟಿ. ಖಾದರ್, ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ ಬೋಳಿಯಾರ್, ಚಂದ್ರಹಾಸ್ ಕರ್ಕೇರ, ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.