ಅನುರಾಧಾ ಕೆ.
Update: 2025-03-24 20:20 IST

ಸುರತ್ಕಲ್: ಪಣಂಬೂರಿನ ನಂದನೇಶ್ವರ ದೇವಳದ ಮೊಕ್ತೇಸರ ರಾಗಿ ಕಾರ್ಯನಿರ್ವಹಿಸಿದ್ದ ಪಣಂಬೂರಿನ ಟಿ.ಪಿ.ಕೇಶವನ್‌ರ ಧರ್ಮಪತ್ನಿ ಅನುರಾಧ ಕೆ. (84) ರವಿವಾರ ಸುರತ್ಕಲ್‌ನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.
ಸುರತ್ಕಲ್‌ನ ಹಿಂದೂ ವಿದ್ಯಾದಾಯಿನಿ ಸಂಘ ಹಾಗೂ ಪಣಂಬೂರು ರೋಟರಿ ಕ್ಲಬ್‌ನ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದ ಅನುರಾಧ, ನಂದನೇಶ್ವರ ದೇವಳದಲ್ಲಿ ತಮ್ಮ ಪತಿಯೊಂದಿಗೆ ಕಾರ್ಯಕರ್ತೆಯಾಗಿ ದುಡಿದು ಎಲ್ಲರ ಪ್ರೀತಿಪಾತ್ರರಾಗಿದ್ದರು. ಕಲಾರಾಧಕರಾದ ಅಮೇರಿಕಾ ನಿವಾಸಿ, ಪಣಂಬೂರು ಮೀನಾಕ್ಷೀ ವಾಸುದೇವ ಐತಾಳ್ ಸಹಿತ ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.