ಮಹೇಶ್ ಪೂಜಾರಿ
Update: 2025-03-20 18:08 IST

ಸುರತ್ಕಲ್: ಸುರತ್ಕಲ್ ನಲ್ಲಿರುವ ಹೊಟೇಲ್ ಸೂರಜ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ರಹ್ಮಾವರ ಸಾಸ್ತಾನ ನಿವಾಸಿ ಮಹೇಶ್ ಪೂಜಾರಿ (52) ಅವರು ಮಾ.20ರಂದು ಸುರತ್ಕಲ್ ನಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಸುಭಾಷಿತ ನಗರ ರೆಸಿಡೆನ್ಸಿ ವೆಲ್ ಫೇರ್ ಅಸೋಸಿಯೇಶನ್ ನ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.