ಅಬ್ದುಲ್ ರಝಾಕ್
Update: 2025-03-23 17:45 IST

ವಿಟ್ಲ: ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಅಬ್ದುಲ್ ರಝಾಕ್(45) ಹೃದಯಾಘಾತದಿಂದ ರವಿವಾರ ಬೆಳಿಗ್ಗೆ ನಿಧನರಾದರು.
ವಿಟ್ಲದ ರೀಹಾ ಪ್ಲಾನೆಟ್ ನಲ್ಲಿ ಗಾರ್ಡನ್ ಎಂಬ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ರಝಾಕ್ ವಿಟ್ಲದ ಎಲ್ಲರಿಗೂ ಚಿರಪರಿಚಿತರು. ಶನಿವಾರ ರಾತ್ರಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು. ರಾತ್ರಿ ಅವರಿಗೆ ಎದೆ ನೋವು ಕಾಣಿಸಿದೆ. ಬಳಿಕ ಅವರು ಮಾತ್ರೆ ತಗೆದು ಮಲಗಿದ್ದಾರೆ. ಬೆಳಿಗ್ಗೆ ಮತ್ತೆ ಜೋರಾಗಿ ಎದೆನೋವು ಉಂಟಾಗಿದೆ. ತಕ್ಷಣವೇ ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, ಮೂವರು ಪುತ್ರರು, ಒಬ್ಬಳು ಪುತ್ರಿ ಇದ್ದಾರೆ.