ಶಾಂಭವಿ ಹೆಗ್ಗಡ್ತಿ

Update: 2024-11-19 17:49 GMT

ಮಂಗಳೂರು: ಶಿರ್ವ ನಡಿಬೆಟ್ಟು ದಿ. ಪಟೇಲ್ ಗೋಪಾಲ್ ಹೆಗಡೆಯವರ ಧರ್ಮಪತ್ನಿ ಶಾಂಭವಿ ಹೆಗ್ಗಡ್ತಿ (91) ಸೋಮವಾರ ನಿಧನರಾದರು.

ಸಾಹಿತ್ಯ ಹಾಗೂ ಲಲಿತ ಕಲೆಗಳಲ್ಲಿ ಅಪಾರ ಆಸಕ್ತಿ ಹೊಂದಿದ ಅವರು1960-70ರ ದಶಕಗಳಲ್ಲಿ ಶಿರ್ವ ಮಹಿಳಾ ಮಂಡಲದ ಅಧ್ಯಕ್ಷರಾಗಿ ಅದರ ಸರ್ವತೋಮುಖ ಬೆಳವಣಿಗೆಯ ರೂವಾರಿಯಾಗಿದ್ದವರು. ಶಿರ್ವ ಪಂಚಾಯತ್ ಬೋರ್ಡ್ ಸದಸ್ಯರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ವಿಜಯ ಬ್ಯಾಂಕ್‌ನ ನಿವೃತ್ತ ಹಿರಿಯ ಪ್ರಬಂಧಕ ಪ್ರಕಾಶ್ ಹೆಗ್ಡೆ ಸೇರಿದಂತೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಫವಾಝ್
ಆನಂದ ಕಟೀಲು