ಕಾಂಗ್ರೆಸ್ ಸರಕಾರಕ್ಕೆ ಸಂವಿಧಾನ, ಸಂಸತ್ತಿನ ಬಗ್ಗೆ ಗೌರವವಿಲ್ಲ : ಬಸವರಾಜ ಬೊಮ್ಮಾಯಿ

Update: 2024-11-08 14:38 GMT
Photo of Basavaraja Bommai

ಬಸವರಾಜ ಬೊಮ್ಮಾಯಿ

  • whatsapp icon

ಹುಬ್ಬಳ್ಳಿ : ವಕ್ಫ್ ಕಾಯ್ದೆ ತಿದ್ದುಪಡಿಗೆ ಸಂವಿಧಾನ ಬದ್ದವಾಗಿ ಸಂಸತ್ತಿನ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಸಮಿತಿ ಬಗ್ಗೆ ಆರೋಪ ಮಾಡುವ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಸಂವಿಧಾನ, ಸಂಸತ್ತಿನ ಬಗ್ಗೆ ಗೌರವ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಸಂಸದೀಯ ಮಂಡಳಿ ಕರ್ನಾಟಕಕ್ಕೆ ಭೇಟಿ ಮಾಡಿರುವುದಕ್ಕೆ ಅದೊಂದು ಯಾವುದೇ ಆಧಾದ ರಹಿತವಾದ ಸಮಿತಿ ಎಂದು ಕಾಂಗ್ರೆಸ್‍ನವರು ಆರೋಪಿಸಿರುವುದು ಖಂಡನೀಯ ಎಂದರು.

ಇದು ಸಂಸತ್ತಿನ ಉಭಯ ಸದನಗಳಿಂದ ರಚನೆಯಾದ ಸಮಿತಿ, ಪಾರ್ಲಿಮೆಂಟ್ ಜಂಟಿ ಸದನ ಮಾಡಿದ ಸಮಿತಿಗೆ ತನ್ನದೇ ಆದ ಗೌರವ ಇದೆ. ಕರ್ನಾಟಕದಲ್ಲಿ ಸಮಸ್ಯೆ ಇದೆ ಅಂತ ಅವರು ಇಲ್ಲಿಗೆ ಬಂದಿದ್ದರು. ಯಾವುದೇ ರೀತಿಯ ರಾಜಕೀಯ ಇಲ್ಲ ಎಂದು ಅವರು ತಿಳಿಸಿದರು.

ಸಮಿತಿಯವರು ರಾಜ್ಯದ ರೈತರ ಸಮಸ್ಯೆ ಆಲಿಸಿದ್ದಾರೆ. ಆದರೆ, ಈ ರಾಜ್ಯ ಸರಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಓಲೈಕೆ ರಾಜಕಾರಣ ಮಾಡಲು ಆರೋಪ ಮಾಡುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News