ಕದನ ವಿರಾಮ ಘೋಷಿಸಿದರೆ ಹಮಾಸ್‌ ಎದುರು ಶರಣಾದಂತೆ: ಇಸ್ರೇಲ್‌ ಪ್ರಧಾನಿ ನೆತನ್ಯಾಹು

Update: 2023-10-31 07:25 GMT

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (PTI) 

ಟೆಲ್‌ ಅವೀವ್‌ : ಹಮಾಸ್‌ ವಿರುದ್ಧದ ಇಸ್ರೇಲ್‌ ಯುದ್ಧದಲ್ಲಿʼಕದನವಿರಾಮʼ ಇರುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಕದನ ವಿರಾಮ ಘೋಷಿಸಿದ್ದೇ ಆದಲ್ಲಿ ಅದು ಇಸ್ರೇಲ್‌ನ 1400 ಜನರನ್ನು ಕೊಂದ ಹಾಗೂ 230 ಜನರನ್ನು ಒತ್ತೆಯಾಳಾಗಿ ಇರಿಸಿ ಹಮಾಸ್‌ ಎದುರು ಶರಣಾದಂತೆ ಎಂದು ನೆತನ್ಯಾಹು ಹೇಳಿದ್ದಾರೆ.

“ಹೀಗೆ ಮಾಡಿದಲ್ಲಿ ಇದು ಉಗ್ರವಾದದ ಎದುರು ಶರಣಾದಂತೆ. ಇದು ನಡೆಯದು,” ಎಂದು ಹೇಳಿದ ಅವರು ಈ ಯುದ್ಧವನ್ನು ಗೆಲ್ಲುವ ತನಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಹಮಾಸ್‌ ಒತ್ತೆಯಾಳಾಗಿ ಇರಿಸಿದವರನ್ನು ತಕ್ಷಣ ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆಗೊಳಿಸಬೇಕೆಂದು ಅಂತರರಾಷ್ಟ್ರೀಯ ಸಮುದಾಯ ಆಗ್ರಹಿಸಬೇಕು ಎಂದು ಅವರು ಹೇಳಿದ್ದಾರೆ.

ಇಸ್ರೇಲಿ ಸೇನಾಪಡೆಗಳು ಹಮಾಸ್‌ ವಿರುದ್ಧ ವ್ಯವಸ್ಥಿತ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News