ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಹತ್ತಿಕ್ಕಬೇಕೆಂಬ ಟ್ರಂಪ್ ಆದೇಶ ತಿರಸ್ಕರಿಸಿದ ವಿವಿ ಆಡಳಿತ

Update: 2025-04-15 21:45 IST
ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಹತ್ತಿಕ್ಕಬೇಕೆಂಬ ಟ್ರಂಪ್ ಆದೇಶ ತಿರಸ್ಕರಿಸಿದ ವಿವಿ ಆಡಳಿತ

 ಡೊನಾಲ್ಡ್ ಟ್ರಂಪ್ | PC : NDTV 

  • whatsapp icon

ನ್ಯೂಯಾರ್ಕ್: ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ನೀಡಬಾರದೆಂಬ ತನ್ನ ಆದೇಶವನ್ನು ತಿರಸ್ಕರಿಸಿದ ಅಮೆರಿಕದ ಹಾರ್ವರ್ಡ್ ವಿವಿ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯಕ್ಕೆ ನೀಡಲಾಗುವ 2.2 ಶತಕೋಟಿ ಡಾಲರ್ ಅನುದಾನವನ್ನು ಸ್ತಂಭನಗೊಳಿಸಿದ್ದಾರೆ.

ಇದರ ಜೊತೆಗೆ ವಿಶ್ವವಿದ್ಯಾನಿಲಯಕ್ಕೆ ನೀಡಲಾದ 60 ದಶಲಕ್ಷ ಡಾಲರ್‌ ಗಳ ಗುತ್ತಿಗೆಯನ್ನು ಕೂಡಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿವಿಯ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಚಳವಳಿಗಳನ್ನು ಹತ್ತಿಕ್ಕುವಂತೆ ಸೂಚಿಸಿ ಟ್ರಂಪ್ ಆಡಳಿತವು ಹಾರ್ವರ್ಡ್ ವಿವಿಗೆ ಪತ್ರ ಬರೆದಿತ್ತು. ವಿವಿ ಕ್ಯಾಂಪಸ್‌ನಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತ ಈ ಆದೇಶವನ್ನು ಹೊರಡಿಸಿತ್ತು. ಕ್ಯಾಂಪಸ್‌ ನಲ್ಲಿ ಮುಖವನ್ನು ಮುಚ್ಚಿಕೊಳ್ಳುವುದನ್ನು ನಿಷೇಧಿಸುವುದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪರಿಶೋಧನೆ ಹಾಗೂ ಅರ್ಹತೆ ಆಧಾರದಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಇತ್ಯಾದಿ ಕೆಲವು ಕ್ರಮಗಳನ್ನು ಕೂಡಾ ಜಾರಿಗೊಳಿಸುವಂತೆ ಟ್ರಂಪ್ ಸಲಹೆ ನೀಡಿದ್ದರು.

ಆದರೆ ಟ್ರಂಪ್ ಆಡಳಿತದ ಪ್ರಸ್ತಾವನೆಯನ್ನು ಹಾರ್ವರ್ಡ್ ವಿವಿ ಅಧ್ಯಕ್ಷ ಆಲನ್ ಗಾರ್ಬರ್ ತಳ್ಳಿಹಾಕಿದ್ದು, ವಿವಿಯ ಫೆಡರಲ್ ಅಧಿಕಾರದ ಮೇಲೆ ನಡೆದ ಅತಿಕ್ರಮಣ ಇದಾಗಿದೆಯೆಂದು ಹೇಳಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸಿದ ಹತ್ಯಾಕಾಂಡದ ವಿರುದ್ಧ ಅಮೆರಿಕದ ಕಾಲೇಜ್ ಹಾಗೂ ವಿವಿ ಕ್ಯಾಂಪಸ್‌ ಗಳಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಪ್ರತಿಭಟನೆಗಳು ಹಲವೆಡೆ ಹಿಂಸಾತ್ಮಕ ತಿರುವನ್ನು ಪಡೆದುಕೊಂಡಿತ್ತು. ವಿದ್ಯಾರ್ಥಿಗಳ ಫೆಲೆಸ್ತೀನ್ ಪರ ನಿಲುವಿಗೆ ಟ್ರಂಪ್ ಹಾಗೂ ರಿಪಬ್ಲಿಕನ್ನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟ್ರಂಪ್ ಅವರು ಎರಡನೆ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ರಂಪ್ ಆಡಳಿತವು ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News