ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಕಸ ಎಂದು ಜರಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ; ರಿಪಬ್ಲಿಕನ್ ಪಕ್ಷದ ತಿರುಗೇಟು
ವಾಷಿಂಗ್ಟನ್ : ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ರ ಬೆಂಬಲಿಗರನ್ನು ಕಸ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜರಿದಿದ್ದು ಭಾರಿ ವಿವಾದ ಸೃಷ್ಟಿಯಾಗಿದೆ.
ಮಂಗಳವಾರ ಲ್ಯಾಟಿನೊ ಮತದಾರರನ್ನುದ್ದೇಶಿಸಿ ಪ್ರಚಾರ ನಡೆಸಿದ ಜೋ ಬೈಡನ್, ಡೊನಾಲ್ಡ್ ಟ್ರಂಪ್ ರ ಚುನಾವಣಾ ಸಮಾವೇಶದಲ್ಲಿ ಜನಾಂಗೀಯ ನಿಂದನೆಯ ಹಾಸ್ಯ ಮಾಡಿದ್ದ ಕಾಮೆಡಿಯನ್ ಪ್ಯೂರ್ಟೊ ರಿಕೊರನ್ನು ಕಸದ ದ್ವೀಪ ಎಂದು ಟೀಕಿಸಿದ್ದಾರೆ.
“ನಾನು ಇಲ್ಲಿ ನೋಡುತ್ತಿರುವ ತೇಲುತ್ತಿರುವ ಕಸವೆಂದರೆ, ಅದು ಟ್ರಂಪ್ ಬೆಂಬಲಿಗರು. ಲ್ಯಾಟಿನೊರನ್ನು ಅವರು ಬಣ್ಣಿಸಿರುವ ರೀತಿ ಪ್ರಜ್ಞಾಹೀನವಾಗಿದ್ದು, ಅಮೆರಿಕನ್ನರಿಗೆ ತಕ್ಕುದಲ್ಲ. ಇದು ನಾವೇನು ಇಲ್ಲಿಯವರೆಗೆ ಮಾಡಿದ್ದೇವೋ ಅದಕ್ಕೆ ಸಂಪೂರ್ಣ ವಿರುದ್ಧವಾದು. ನಾವೇನಾಗಿದ್ದೇವೋ ಅದಕ್ಕೆ ತದ್ವಿರುದ್ಧವಾಗಿದೆ” ಎಂದು ವಾಗ್ದಾಳಿ ನಡೆಸಿದ್ದರು.
ಈ ವಿಷಯವನ್ನು ಪೆನ್ಸಿಲ್ವೇನಿಯದಲ್ಲಿರುವ ಅಲೆನ್ ಟೌನ್ ನಲ್ಲಿ ನೆರೆದಿದ್ದ ಸಾವಿರಾರು ಟ್ರಂಪ್ ಬೆಂಬಲಿಗರೆದುರು ರಿಪಬ್ಲಿಕನ್ ಸೆನೆಟರ್ ಮಾರ್ಕೊ ರುಬಿಯೊ ಪ್ರಸ್ತಾಪಿಸಿದರು. ಡೊನಾಲ್ಡ್ ಟ್ರಂಪ್ ಕೂಡಾ ಈ ಹೇಳಿಕೆಯನ್ನು ತಕ್ಷಣವೇ ಖಂಡಿಸಿದ್ದಾರೆ.