ಮಂಗಳೂರು: ಉದ್ಯೋಗದ ಆಮಿಷವೊಡ್ಡಿ ವಂಚನೆ; ಪ್ರಕರಣ ದಾಖಲು

Update: 2023-06-19 17:36 GMT

ಮಂಗಳೂರು, ಜೂ.19: ಕೆನಡಾದಲ್ಲಿ ಉದ್ಯೋಗದ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ಹಣವನ್ನೂ ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದೇಶದಲ್ಲಿ ಉದ್ಯೋಗಾವಕಾಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಾನು ಹುಡುಕಾಟ ನಡೆಸುತ್ತಿದ್ದಾಗ ಮಾ.28ರಂದು ಇನ್‌ಸ್ಟಾ ಗ್ರಾಂ ಖಾತೆಯ ಮೂಲಕ ವಿಲಿಯಂ ಪೌಲ್ ಆ್ಯಂಟನಿ ಎಂಬಾತನ ಪರಿಚಯವಾಗಿತ್ತು. ಆತ ತಾನು ಕೆನಡಾ ದೇಶದ ಪ್ರಜೆಯಾಗಿದ್ದು ಇಮಿಗ್ರೇಷನ್ ಅಧಿಕಾರಿಯಾಗಿರುವುದಾಗಿ ಪರಿಚಯಿಸಿಕೊಂಡು ಕೆನಡಾ ದೇಶದಲ್ಲಿ ಉದ್ಯೋಗ ಒದಗಿಸಿಕೊಡುವುದಾಗಿ ನಂಬಿಸಿದ. ಬಳಿಕ ವಾಟ್ಸ್‌ಆ್ಯಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ. ಉದ್ಯೋಗ ನೇಮಕಾತಿಯ ಬಗ್ಗೆ ವಿವಿಧ ದಾಖಲೆಗಳನ್ನು ಕಳುಹಿಸುತ್ತಿದ್ದ. ಹಾಗೇ ಮಾ.28ರಿಂದ ಜೂ.9ರ ಮಧ್ಯೆ ಹಂತ ಹಂತವಾಗಿ 4.80 ಲ.ರೂ.ಗಳನ್ನು ವರ್ಗಾಯಿಸಿಕೊಂಡು ಬಳಿಕ ಉದ್ಯೋಗ ಒದಗಿಸದೆ ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News