ಗರ್ಭಿಣಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ 108 ಸಿಬ್ಬಂದಿ
Update: 2023-07-09 12:55 GMT
ಕೊಲ್ಲೂರು , ಜು.9: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ 108 ಸಿಬ್ಬಂದಿ ಮನೆಯಲ್ಲಿಯೇ ಹೆರಿಗೆ ಮಾಡಿಸಿರುವ ಘಟನೆ ಜಡ್ಕಲ್ ಸಳ್ಕೊಡ ಎಂಬಲ್ಲಿ ರವಿವಾರ ಬೆಳಗಿನ ಜಾವ 4.30ರ ಸುಮಾರಿಗೆ ನಡೆದಿದೆ.
ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಲ್ಲೂರು 108 ಸಿಬ್ಬಂದಿ ಸಳ್ಕೊಡ ಗ್ರಾಮಕ್ಕೆ ಧಾವಿಸಿದರು. ಮಹಿಳೆ ತೀವ್ರ ನೋವಿನಿಂದ ಬಳಲುತಿದ್ದ ಹಿನ್ನೆಲೆಯಲ್ಲಿ 108 ಸಿಬ್ಬಂದಿ ನಾಗರಾಜ ಹಾಗೂ ಪೈಲಟ್ ಚಂದ್ರಪ್ಪಇಆರ್‌ಸಿಪಿ ಡಾ.ಸಂಜಯ್ ಮಾರ್ಗಸೂಚನೆಯನ್ನು ತೆಗೆದುಕೊಂಡು ಮನೆಯಲ್ಲಿಯೇ ಹೆರಿಗೆ ಮಾಡಿಸಿದರು. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು ಇವರನ್ನು ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.