ಗೃಹಜ್ಯೋತಿ ಯೋಜನೆಗೆ ನಗರದ ಶೇ 80ರಷ್ಟು ಕುಟುಂಬಗಳು ಫಲಾನುಭವಿಗಳಾಗುತ್ತಾರೆ : ಐವನ್ ಡಿಸೋಜ

Update: 2023-07-03 16:14 GMT

ಮಂಗಳೂರು, ಜು.3: ಮಂಗಳೂರು ನಗರ ದಕ್ಷಿಣ ವಿಧಾನ ಕ್ಷೇತ್ರದ ಸುಮಾರು 81,000 ಕುಟುಂಬಗಳ ಪೈಕಿ ಶೇಕಡ 80ರಷ್ಟು ಕುಟುಂಬಗಳು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಲಿದ್ದು, ಉತ್ತಮ ಸ್ಪಂದನೆ ಬಂದಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ತಿಳಿಸಿದ್ದಾರೆ.

ಸರಳವಾದ ನೊಂದವಾಣಿಯ ಕಾರ್ಯಕ್ರಮದಲ್ಲಿ ವಿದ್ಯುಚ್ಖಕ್ತಿ ಇಲಾಖೆಯ ಜೊತೆಗೆ ಸಾರ್ವಜನಿಕರು ಮತ್ತು ಎಲ್ಲಾ ಪಕ್ಷಗಳ ಪ್ರಮುಖರು ಭಾಗವಹಿಸಿ ಸರಕಾರದ ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ವಿನಂತಿಸಿದರು.

ನಗರದ ಶಕ್ತಿನಗರ, ಬಂದರ್, ಹೊಗೆಬಜಾರ್‌ಗಳಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.

ಸಮಾರಂಭದಲ್ಲಿ ಸುಧಾಕರ್ ಜೋಗಿ, ಆಶಾ, ಯಶವಂತ್ ಕಾಮತ್, ರಿತೇಶ್ ಶಕ್ತಿನಗರ, ಡಿ.ಎಸ್.ಅಸ್ಲಾಂ, ಕಾರ್ಪೊರೇಟರ್‌ಗಳಾದ ಜೀನತ್, ಅಬ್ದುಲ್ ಲತೀಫ್, ಮಾಜಿ ಕಾರ್ಪೊರೇಟರುಗಳಾದ ಭಾಸ್ಕರ್ ರಾವ್, ನಾಗೇಂದ್ರ ಕುಮಾರ್, ಕವಿತಾ ವಾಸು, ಮೆಸ್ಕಾಂ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯದರ್ಶಿಯಾದ ಟಿ.ಹೊನ್ನಯ್ಯ, ದುರ್ಗಾ ಪ್ರಸಾದ್, ಮೈಕಲ್ ನೊರೊನ್ಹ,ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News