ಜು. 17ರಿಂದ ಸೇನಾ ನೇಮಕಾತಿ ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗೆ ನಗರಸಭೆಯಿಂದ ವಸತಿ ವ್ಯವಸ್ಥೆ
ಉಡುಪಿ, ಜು.15: ಭಾರತೀಯ ಸೇನೆಯ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಯು ಜುಲೈ 17ರಿಂದ 25ರವರೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಈ ಕೆಳಕಂಡ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಗೋವಿಂದ ಕಲ್ಯಾಣ ಮಂಟಪ, ಅಜ್ಜರಕಾಡು ವಾರ್ಡಿನ ಭುಜಂಗ ಪಾರ್ಕ್‌ನ ಹತ್ತಿರ ದೂ.ಸಂಖ್ಯೆ: 8660793549, ಅಂಬೇಡ್ಕ್‌ರ್ ಭವನ, ಆದಿಉಡುಪಿ - ದೂ.ಸಂಖ್ಯೆ: 9480843209, ನಾರಾಯಣಗುರು ಸಭಾ ಭವನ ಬನ್ನಂಜೆ, ಕೆ.ಎಸ್.ಆರ್.ಟಿ.ಸಿ. ಬಸ್‌ನಿಲಾಣದ ಬಳಿ - ದೂ. ಸಂಖ್ಯೆ: 9481518767, ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪ (ಸಭಾ ಭವನ) ಅಂಬಲಪಾಡಿ- ದೂ.ಸಂಖ್ಯೆ: 9742338533.
ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳು ಸಭಾಭವನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡತಕ್ಕದ್ದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ವಾಸ್ತವ್ಯ ಹೂಡಬಾರದು. ಹೆಚ್ಚಿನ ಮಾಹಿತಿಗಾಗಿ 8296840456, 9148532284 ಮತ್ತು 9535052544 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.