ಕೀಳಂಜೆಯ ಪರಿಸರದಲ್ಲಿ ಮತ್ತೆ ಕಾಡುಕೋಣಗಳ ಹಾವಳಿ
Update: 2023-07-14 13:58 GMT
ಉಡುಪಿ: ಹಾವಂಜೆ ಗ್ರಾಮದ ಕೀಳಂಜೆಯಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಗದ್ದೆಯಲ್ಲಿ ಬೆಳೆದ ಬೆಳೆ ನಾಶವಾಗಿ ರೈತರು ನಷ್ಟ ಅನುಭವಿಸುವಂತಾಗುತ್ತಿದೆ.
ಕಾಡುಕೋಣಗಳು ರಾತ್ರಿ ವೇಳೆ ಗದ್ದೆಯಲ್ಲಿ ಸಂಚರಿಸಿ ನಾಟಿ ಮಾಡಿದ ಪೈರನ್ನು ತಿಂದು ತೇಗಿದೆ. ಇತ್ತ ಕೃಷಿ ಮಾಡಿ ನಿಟ್ಟಿಸಿರು ಬಿಡುವ ವೇಳೆಯಲ್ಲಿಯೇ ರೈತರು ಮತ್ತೆ ಕಾಡುಕೋಣ ಹಾವಳಿಯಿಂದ ಕಂಗಾಲಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ಕಾಡುಕೋಣಗಳ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿ ಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರ ಫಸಲನ್ನು ಕಾಡುಕೋಣಗಳ ಹಾವಳಿಯಿಂದ ರಕ್ಷಿಸಬೇಕು ಎಂದು ಸ್ಥಳೀಯರಾದ ಜಯಶೆಟ್ಟಿ ಬನ್ನಂಜೆ, ಶಶಿ ಪೂಜಾರಿ ಕೀಳಂಜೆ, ಸುಧಾಕರ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.