ಕೃಷಿ ನಮ್ಮ ದೇಶದ ಆರ್ಥಿಕತೆಯ ತಾಯಿಬೇರು: ಎಲ್ಲೂರು ಶಶಿಧರ್ ಶೆಟ್ಟಿ
ಕಾರ್ಕಳ : ಕೃಷಿ ನಮ್ಮ ದೇಶದ ಆರ್ಥಿಕತೆಯ ತಾಯಿಬೇರು. ಆ ನೆಲೆಯಲ್ಲಿ ಶಾಲಾ ಮಕ್ಕಳಿಗೆ ಕೃಷಿಯ ಮಹತ್ವವನ್ನು ಎಳವೆಯಲ್ಲಿಯೇ ತಿಳಿಯಪಡಿಸಿ ಆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಿ ಕೃಷಿ ಅಭ್ಯುದಯ ಸಾಧಿಸುವುದು ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ಗುರಿಯಾಗಿದೆ ಎಂದು ಉಡುಪಿ ಜಿಲ್ಲ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಎಲ್ಲೂರು ಶಶಿಧರ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಕುಕ್ಕುಂದೂರು ಅಯ್ಯಪ್ಪ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಕಳ ಬ್ಲಾಕ್ ಕಿಸಾನಾ ಘಟಕ ಹಾಗೂ ಉಡುಪಿ ಜಿಲ್ಲಾ ಕಿಸಾನ್ ಘಟಕ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ತರಕಾರಿ ಬೆಳೆಸುವ ಸ್ಪರ್ದೆಯ ಅಂಗವಾಗಿ ತರಕಾರಿ ಬೀಜ ವಿತರಿಸುವ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದ ಅವರು, ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಳೆದ ನಾಲ್ಕು ವರ್ಷಗಳಿಂದ ಆಯ್ದ ಶಾಲೆಗಳಲ್ಲಿ ಉಚಿತ ಬೀಜ ವಿತರಿಸಿ ತರಕಾರಿ ಬೆಳೆ ಬೆಳೆಸುವ ಸ್ಫರ್ದೆಯನ್ನು ಆಯೋಜಿಸುತ್ತಾ ಬಂದಿದ್ದು ಇದರಲ್ಲಿ ಉತ್ತಮವಾಗಿ ತರಕಾರಿ ಬೆಳೆಸಿದವರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಹೇಳಿದರು.
ಉಡುಪಿ ಕಿಸಾನ್ ಘಟಕದ ಉಪಾಧ್ಯಕ್ಷ ಶೇಖರ ಕೋಟ್ಯಾನ್ ಮಕ್ಕಳಿಗೆ ತರಕಾರಿ ಬೀಜ ವಿತರಿಸಿ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಬ್ಲಾಕ್ ಕಿಸಾನ್ ಘಟಕದ ಅದ್ಯಕ್ಷ ಉದಯ ವಿ. ಶೆಟ್ಟಿ ಶಾಲೆಗೆ ಕೃಷಿ ಉಪಕರಣ ವಿತರಿಸಿ ಉಪಕರಣ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಸಂದರ್ಭೋಚಿತವಾಗಿ ಮಾತಾಡಿ ಕಿಸಾನ್ ಕಾಂಗ್ರೆಸ್ಸಿನ ಕೃಷಿ ಜಾಗೃತಿ ಕಾರ್ಯಕ್ರಮವನ್ನು ಪ್ರಶಂಶಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸದಾನಂದ ಪುರೋಹಿತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉದಯ ಹೇರೂರು, ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ರಘುನಾಥ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿಲ್ ಪೂಜಾರಿ, ಸದಸ್ಯೆ ಶಾಂತಿ ಕಿಣಿ, ಮಾಜಿ ಸದಸ್ಯ ರುಕ್ಮಯ ಶೆಟ್ಟಿಗಾರ, ಉಮೇಶ ಕಿಣಿ, ಶಾಲಾ ಶಿಕ್ಷಕಿಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.