ನಕಲಿ ದೃಢೀಕರಣ ಪತ್ರ ಆರೋಪ: ಪ್ರಕರಣ ದಾಖಲು

Update: 2023-06-26 17:23 GMT

ಮಂಗಳೂರು, ಜೂ.26: ವಿದೇಶಕ್ಕೆ ತೆರಳಿದ ಯುವತಿಗೆ ನಕಲಿ ದೃಢೀಕರಣ ಪತ್ರ ನೀಡಿದ ಆರೋಪದ ಮೇಲೆ ನಗರದ ಸಂಸ್ಥೆಯೊಂದರ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ್ಯಂಟನಿ ಎಂಬವರ ಪುತ್ರಿಯು ನಗರದ ಖಾಸಗಿ ಕಾಲೇಜಿನಲ್ಲಿ 2017ರಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದು, ಯುಎಇಯಲ್ಲಿ ಕಳೆದ 5 ವರ್ಷಗಳಿಂದ ಎಂಎಸ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ.

2018ರ ಅಕ್ಟೋಬರ್‌ನಲ್ಲಿ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಯುಎಇ ಎಕ್ಷ್‌ಚೇಂಜ್ ಎಂಬ ಹೆಸರಿನ ಸಂಸ್ಥೆಯ ಶೈಲೇಶ್ ಶೆಟ್ಟಿ ಎಂಬವರಿಂದ ಯುವತಿಯ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಯ ಸರ್ಟಿಫಿಕೇಟನ್ನು ಹೊಸದಿಲ್ಲಿಯಲ್ಲಿರುವ ಯುಎಇ ಎಂಬಾಸಿಯಿಂದ ದೃಢೀಕರಣ ಮಾಡಿಸಿ ದಾಖಲಾತಿಯನ್ನು ಯುವತಿಗೆ ಹಸ್ತಾಂತರಿಸಲಾಗಿತ್ತು.

ಪ್ರಸ್ತುತ ದುಬೈಯಲ್ಲಿ ಯುವತಿಗೆ ಅಲ್ಲಿಯ ಕಾನೂನಿನ ಅನ್ವಯ ಇನ್ನೊಮ್ಮೆ ಸದರಿ ಸರ್ಟಿಫಿಕೇಟನ್ನು ದೃಢೀಕರಣ ಮಾಡಲು 2023ರ ಜೂನ್ ತಿಂಗಳ 16ರಂದು ದುಬೈಯ ವಿದೇಶಾಂಗ ಸಚಿವಾಲಯ ಇಲಾಖೆಗೆ ಹೋಗಿ ನೀಡಿದಾಗ ಈ ಸರ್ಟಿಫಿಕೇಟ್ ದೃಢೀಕರಣ ನಕಲಿ ಎಂಬುದಾಗಿ ತಿಳಿಸಿ ಯುವತಿಯ ಮೂಲ ದಾಖಲಾತಿಯನ್ನು ಸ್ವಾಧೀನಪಡಿಸಲಾಗಿದೆ.

ನಕಲಿ ದೃಢೀಕರಣ ಪತ್ರ ನೀಡಿ ಶೈಲೇಶ್ ಶೆಟ್ಟಿ ಮೋಸ ಮಾಡಿದ್ದು, ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಯುವತಿಯ ತಂದೆಯು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News