ಡಾ.ವಿಜಯಭಾನು ಶೆಟ್ಟಿ ಸಂಶೋದಿಸಿದ ಅಲ್ಝೈಮರ್ಸ್‌ ಔಷಧಿಗೆ ಅಮೆರಿಕಾದ ಪೇಟೆಂಟ್

Update: 2023-07-17 12:05 GMT

ಡಾ.ವಿಜಯಭಾನು ಶೆಟ್ಟಿ

ಉಡುಪಿ: ಮಣಿಪಾಲದ ಡಾ.ಕೃಷ್ಣ ಲೈಫ್ ಸೈನ್ಸಸ್ ಲಿಮಿಟೆಡ್ ಇದರ ಎಂ.ಡಿ ಡಾ.ಎಂ. ವಿಜಯಭಾನು ಶೆಟ್ಟಿ ಅಭಿವೃದ್ಧಿ ಪಡಿಸಿದ ಅಲ್ಝೈಮರ್ಸ್‌ ಮತ್ತು ಪಾರ್ಕಿನ್ ಸೋನಿಸಮ್‌ನ ಆಯುರ್ವೇದ ಔಷಧಿ ಮುನಿಪ್ರಜ್ಞಾ ಮಾತ್ರೆಗಳಿಗೆ ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಆ್ಯಂಡ್ ಟ್ರೇಡ್ ಮಾರ್ಕ್ ಆಫೀಸಿ ನಿಂದ ಪೇಟೆಂಟ್ ಲಭಿಸಿದೆ.

ಇವರು ತಯಾರಿಸಿದ ಸಿಹಿಮೂತ್ರ ರೋಗದ ಇನ್ಸೋಲ್-ಎನ್, ಹೃದಯ ರಕ್ಷಣೆಯ ಹಾರ್ಟೋಜನ್, ಕ್ಯಾನ್ಸರ್ ಕಾಯಿಲೆ ಚಿಕಿತ್ಸೆಯ ಮುನೆಕ್ಸ್, ಮೂತ್ರ ಕೋಶದ ತೊಂದರೆಗಳಿಗೆ ಮುನಿ ಪ್ರಭಾ, ಮಾದಕ ದ್ರವ್ಯ ಚಟ ಬಿಡಿಸುವ ಹರ್ಬಾಡಿಕ್ಟ್, ಲಿಪಿಡ್ ಕೊಲೆಸ್ಟ್ರಾಲ್ ಹಿಡಿತದಲ್ಲಿಡುವ ಹರ್ಬೋಟ್ರಿಮ್, ಥೈರಾಯ್ಡ್ ತೊಂದರೆ ಶಮನದ ಮುನಿಥೈರಾನ್, ಗರ್ಭಾಶಯದ ಕಾಯಿಲೆಗೆ ಸೌಭಾಗ್ಯ ಕಲ್ಪ, ಹಲ್ಲು ಮತ್ತು ಒಸಡಿನ ರಕ್ಷಣೆಗೆ ಮುನಿಡೆಂಟ್, ರೋಗ ನಿರೋಧಕ ಶಕ್ತಿ ವೃದ್ಧಿಗೆ ಹಿರಣ್ಯಪ್ರಾಶ ಬಿಂದುಗಳು ಹಾಗೂ ಕ್ಯಾನ್ಸರ್ ಚಿಕಿತ್ಸಾಕ್ರಮವಾದ ಮಹೋಷದಕಲ್ಪಮೊದಲಾದವುಗಳಿಗೆ ಈಗಾಗಲೇ 20 ವರ್ಷಗಳ ಅಮೆರಿಕಾ ಸರಕಾರದ ಪೇಟೆಂಟ್ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News