ಬಂದ್ಯೋಡ್ | ಕಂಟೈನರ್ ಲಾರಿ ಢಿಕ್ಕಿ: ರಸ್ತೆ ದಾಟುತ್ತಿದ್ದ ವೃದ್ಧ ಮೃತ್ಯು

ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧರೋರ್ವರು ಮೃತಪಟ್ಟ ಘಟನೆ ಬಂದ್ಯೋಡಿನಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.

Update: 2023-06-25 07:54 GMT

ಕಾಸರಗೋಡು, ಜೂ.25: ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧರೋರ್ವರು ಮೃತಪಟ್ಟ ಘಟನೆ ಬಂದ್ಯೋಡಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಬಂಬ್ರಾಣ ನಿವಾಸಿ ಮೊಯ್ದಿನ್ ಕುಂಞಿ(78) ಮೃತಪಟ್ಟವರು. ಇವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಝೀಬ್ರಾ ಲೈನ್ ಮೂಲಕ ರಸ್ತೆ ದಾಟಲು ನಿಂತಿದ್ದಾಗ ಅತೀ ವೇಗದಿಂದ ಬಂದ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಮೊಯ್ದಿನ್ ಕುಂಞಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News