ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಭಾರೀ ಮಳೆ: ವಿವಿಧೆಡೆ ಹಾನಿ

Update: 2023-07-05 17:13 GMT

ಬಂಟ್ವಾಳ : ತಾಲೂಕಿನಲ್ಲಿ ಸೋಮವಾರದಿಂದ ನಿರಂತರ ಹಾಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಮನೆ ಹಾನಿ ಪ್ರಕರಣಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ನೀರಿನ ಮಟ್ಟ ಬುಧವಾರ 3. 6 ಮೀಟರ್ ಗೆ ಏರಿಕೆಯಾಗಿದೆ.

ಕನ್ಯಾನ ಗ್ರಾಮದ ಕರ್ಮಿನಾಡಿ ಎಂಬಲ್ಲಿ ವಸಂತಿ ನಾರಾಯಣ ಶೆಟ್ಟಿ ಎಂಬುವವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. ವೀರಕಂಭ ಗ್ರಾಮದ ಮಜ್ಜೋನಿ ಎಂಬಲ್ಲಿ ನೆಬಿಸ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಾಣಿ ಗ್ರಾಮದ ಪಳಿಕೆ ನಿವಾಸಿ ಮೋಹನ ಕುಲಾಲ್ ಬಿನ್ ಚಂದಪ್ಪ ಮೂಲ್ಯ ಇವರ ಹಂಚಿನ ಮನೆಯ ಮೇಲೆ ಮರ ಬಿದ್ದು ತೀವ್ರ ಹಾನಿ ಆಗಿದೆ, ಅನಂತಾಡಿ ಗ್ರಾಮದ ರೋಹಿಣಿ ಕೋಂ ಸುರೇಶ್ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ವೀರಕಂಭ ಗ್ರಾಮದ ಬೆತ್ತಸರಾವು ಎಂಬಲ್ಲಿ ನಾರಾಯಣ ಮೂಲ್ಯ ರವರ ದನದ ಕೊಟ್ಟಿಗೆ ಹಾನಿಯಾಗಿರುತ್ತದೆ. ಪಿಲಾತಬೆಟ್ಟು ಗ್ರಾಮದ ಮಂಚಗುಡ್ಡೆ ಎಂಬಲ್ಲಿರುವ ಗೋಪಿ ಕೋಂ ಅಣ್ಣು ಮೂಲ್ಯ ಅವರ ಮನೆಯು ಮಳೆಯಿಂದ ಭಾಗಶಃ ಹಾನಿಯಾಗಿದೆ. ಮಾಣಿ ಗ್ರಾಮದ ಕೊಡಾಜೆ ಎಂಬಲ್ಲಿ ಇಸ್ಮಾಯಿಲ್ ಬಿನ್ ಕೆ ಎಸ್ ಅಹಮದ್ ಬ್ಯಾರಿ ಯವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ ವಾಹನದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ವಾಹನವು ಪೂರ್ಣ ಜಖಂ ಆಗಿರುತ್ತದೆ, ಮಂಚಿ ಗ್ರಾಮದ ಹೆಗಡೆಗುಳಿ ನಿವಾಸಿ ಅಲೀಮಮ್ಮ ಕೋಂ ಮುಹಮ್ಮದ್ ಮನೆ ಬಳಿಯ ಬರೆ ಜರಿದು ಮನೆ ಕುಸಿತದ ಅಪಾಯವಿದೆ. ತೆಂಕಕಜೆಕಾರು ಗ್ರಾಮದ ಶೀಲಾವತಿ ಕೋಂ ಶೇಖರ್ ಎಂಬುವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಅಲ್ಲಿಕಂಡೆ ಎಂಬಲ್ಲಿ ರಫೀಕ್ ರವರ ಮನೆ ಮೇಲೆ ಮನೆ ಹಿಂಬದಿಯ ಗುಡ್ಡ ಜರಿದು ಭಾಗಶ: ಹಾನಿಯಾಗಿದೆ. ವೀರಕಂಭ ಗ್ರಾಮದ ಮಜಿ ಎಂಬಲ್ಲಿ ಬೇಬಿ ಕೋಂ ಗಣೇಶ ಮೂಲ್ಯ ರವರ ಮನೆ ಆವರಣ ಗೋಡೆಗೆ ಹಾನಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News