ಮಹಿಳಾ ಕಾವ್ಯದ ನೃತ್ಯ ಅಭಿವ್ಯಕ್ತಿ ‘ಕಾವ್ಯ ಕನ್ನಿಕಾ’ ಕಾರ್ಯಕ್ರಮ

Update: 2023-07-02 12:15 GMT

ಉಡುಪಿ : ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಮಣಿಪಾಲ ರೋಟರಿ ಕ್ಲಬ್, ಮಣಿಪಾಲ ಮಹಿಳಾ ಸಮಾಜದ ಆಶ್ರಯದಲ್ಲಿ ಶಿವಮೊಗ್ಗದ ಮನೋ ವೈದ್ಯ ಹಾಗೂ ಕಲಾವಿದೆ ಡಾ.ಪವಿತ್ರ ಕೆ.ಎಸ್. ಅವರಿಂದ ಅಕ್ಕಮಹಾದೇವಿ, ವೈದೇಹಿ, ಕಮಲಾ ಹಂಪನ, ಪ್ರತಿಭಾ ನಂದಕುಮಾರ್ ಮುಂತಾದ ಕನ್ನಡದ ಪ್ರಸಿದ್ಧ ಕವಯಾತ್ರಿಯರ ಕಾವ್ಯದ ನೃತ್ಯ ಅಭಿವ್ಯಕ್ತಿ, ‘ಕಾವ್ಯ ಕನ್ನಿಕಾ’ ಕಾರ್ಯ ಕ್ರಮವು ಬುಡ್ನಾರಿನ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ರವಿವಾರ ನಡೆಯಿತು.

ಬಳಿಕ ಮಾತನಾಡಿದ ಕಲಾವಿದೆ ಡಾ.ಕೆ.ಎಸ್.ಪವಿತ್ರ, ಮಹಿಳಾವಾದಿ ಎಂದರೆ ಪುರುಷ ವಿರೋಧಿ ಭಾವನೆಯಲ್ಲ. ಮಹಿಳೆಯರ ಮನಸ್ಸು ಆಕೆಯ ಆಂತ ರಿಕ ಭಾವನೆಗಳು ಪುರುಷರಲ್ಲಿ ಕೂಡ ಇರುತ್ತವೆ. ಮಾತು ಮೌನವಾದಾಗ ಸಂಗೀತ ಜನ್ಮ ತಾಳುತ್ತದೆ. ಸಂಗೀತ, ಕಾವ್ಯ ಮುಂತಾದವುಗಳಿಗೆ ವಿಶೇಷ ಶಕ್ತಿ ಇದೆ. ಹಿಂದಿನ ಕವನಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಕಾರ್ಯಕ್ರಮವನ್ನು ಯಕ್ಷಗಾನ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಲಾವಿದೆಯನ್ನು ಗೌರವಿಸಲಾ ಯಿತು. ಮುಖ್ಯ ಅತಿಥಿಗಳಾಗಿ ಕಲಾವಿದೆ ಪ್ರವೀಣ ಮೋಹನ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಡಾ.ಸುಲತಾ ಭಂಡಾರಿ, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಪತಿ ಪರಂಪಳ್ಳಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಸಿ.ಎಸ್.ರಾವ್, ರೇಣು ಜಯರಾಮ್, ನರಸಿಂಹ ಮೂರ್ತಿ, ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಉಪಸ್ಥಿತರಿದ್ದರು.

ಕಲಾವಿದೆ ಶಿಲ್ಪಾಜೋಶಿ ಪರಿಚಯಿಸಿದರು. ಸಂಚಾಲಕ ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News