ಪೆರ್ಡೂರು ಗ್ರಾಮದ ಕೊರಗರ ಭೂಮಿಗಾಗಿ ಧರಣಿ

Update: 2023-07-06 16:22 GMT

ಉಡುಪಿ: ಕೊರಗ ಕುಟುಂಬಗಳಿಗೆ ನೀಡಿರುವ ಪೆರ್ಡೂರು ಗ್ರಾಮದ ಪಾಡಿಗಾರ ಎಂಬಲ್ಲಿರುವ ೮ ಎಕರೆ ಭೂಮಿ ಹಾಗೂ ವಾಂಟ್ಯಾಳ ಎಂಬಲ್ಲಿ ರುವ ಆರು ಎಕರೆ ಭೂಮಿಗೆ ಸಂಬಂಧಿಸಿ ಗಡಿಗುರುತು ಮಾಡಿ ಕೊಡುವಂತೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ಇದರ ನೇತೃತ್ವ ದಲ್ಲಿ ಉಡುಪಿ ತಾಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು.

ಪಾಡಿಗಾರ ಮತ್ತು ವಾಂಟ್ಯಾಳ ಎರಡೂ ಕಡೆಗಳಲ್ಲಿ ಈ ಭೂಮಿಯು ತಮಗೆ ಸೇರಿರುವುದೆಂದು ತಕರಾರು ತೆಗೆದು ಕೊರಗ ಕುಟುಂಬಗಳ ಮೇಲೆ ನಿರಂತರ ದೌರ್ಜನ್ಯ ಕಿರುಕುಳಗಳನ್ನು ನೀಡುತ್ತಿರುವವರಿಗೆ ಸರಕಾರ ಸೂಕ್ತ ಎಚ್ಚರಿಕೆಯನ್ನು ನೀಡಬೇಕು ಎಂದು ಧರಣಿನಿರತು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಎಸಿ ರಶ್ಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಎಸಿ, ವಾರದೊಳಗೆ ಸಭೆ ಕರೆದು ಚರ್ಚಿಸಿ ಸರ್ವೆ ನಡೆಸಿ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸಲಾಯಿತು.

ಧರಣಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಮುಖಂಡರಾದ ದಿವಾಕರ್ ಕಳತ್ತೂರು, ಸಂಜೀವ ಕೊರಗ, ಬೊಗ್ರ ಕೊರಗ ಕೊಕ್ಕರ್ಣೆ, ನರಸಿಂಹ ಕೊರಗ, ಶಶಿಕಲಾ ಜನ್ನಾಡಿ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News