ಉಡುಪಿಗೆ ಕುಡಿಯುವ ನೀರು ಸರಬರಾಜು: ನೀರಿನ ಬಣ್ಣದ ಕುರಿತು ನಗರಸಭೆಯಿಂದ ಸ್ಪಷ್ಟೀಕರಣ

Update: 2023-06-26 14:26 GMT

ಉಡುಪಿ, ಜೂ.೨೬: ಹಿರಿಯಡ್ಕದ ಬಳಿ ಇರುವ ಉಡುಪಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಬಜೆ ಡ್ಯಾಂಗೆ ಸ್ವರ್ಣ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಬಂದಿದ್ದು, ಈ ನೀರಿನಲ್ಲಿ ಬಂದ ಕಸಕಡ್ಡಿಗಳನ್ನು ಗೇಟ್ ತೆಗೆದು ನದಿಯಿಂದ ಹೊರ ಬಿಡಲಾಗಿದೆ. ಅದೇ ನೀರನ್ನು ತೆಗೆದು ಕೊಂಡು ಶುದ್ಧೀಕರಣ ಮಾಡಿ, ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಇದು ಪ್ರಥಮ ಮಳೆಯಾಗಿರುವುದರಿಂದ ಆಲಂ ಪ್ರಮಾಣ ಈ ಹಿಂದೆ ನಿಗದಿಪಡಿಸಿದಂತೆ ಇರುವುದರಿಂದ ಸಾರ್ವಜನಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ಕೆಂಪು ಬಣ್ಣದ ನೀರು ಸರಬರಾಜು ಆಗಿರುತ್ತದೆ.

ಈಗಾಗಲೇ ಆಲಂ ಪ್ರಮಾಣವನ್ನು ಸರಿಪಡಿಸಲಾಗಿದ್ದು, ನಗರಸಭೆ ನೀರು ಸರಬರಾಜು ಮಾಡುತ್ತಿರುವ ನೀರಿನಲ್ಲಿ ಕಸ-ಕಡ್ಡಿಗಳು ಬಂದಿರುವುದಿಲ್ಲ. ನೀರಿನ ಬಣ್ಣ ಮಾತ್ರ ಬದಲಾವಣೆ ಆಗಿದೆ. ಇದು ಹೆಚ್ಚು ಮಳೆ ಬಿದ್ದಾಗ ಸ್ವಾಭಾವಿಕವಾಗಿ ಸಂಪೂರ್ಣ ಬಣ್ಣ ತೆಗೆಯಲು ಸಾಧ್ಯವಾಗಿಲ್ಲ. ಆದಾಗ್ಯೂ ನಗರಸಭೆ ಸಾರ್ವಜನಿಕರ ಸುರಕ್ಷತೆಗೋಸ್ಕರ ಸಂಪೂರ್ಣ ಶುದ್ದೀಕರಣ ಮಾಡಿ ನೀರು ವಿತರಿಸಲು ಕ್ರಮ ಕೈಗೊಳ್ಳಲಿದ್ದು, ಮಳೆಗಾಲ ಆಗಿರುವ ಕಾರಣ ಜನರು ನೀರನ್ನು ಕಾಯಿಸಿ ಕುಡಿಯುವಂತೆ ನಗರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News