ಮಳೆ ನೀರು ಒಳಚರಂಡಿಗೆ ಸಂಪರ್ಕ ತೆರವುಗೊಳಿಸದಿದ್ದರೆ ಜುಲೈ 20ರ ನಂತರ ದಂಡ: ಮನಪಾ ಆಯುಕ್ತರು ಎಚ್ಚರಿಕೆ

Update: 2023-07-11 12:06 GMT

ಮಂಗಳೂರು, ಜು. 11: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಬಹುಮಹಡಿ ವಸತಿ ಕಟ್ಟಡಗಳು ತಮ್ಮಲ್ಲಿ ಶೇಖರವಾಗುವ ಮಳೆ ನೀರನ್ನು ಮಳೆ ಚರಂಡಿಗೆ ಬಿಡದೆ ಒಳಚರಂಡಿ ಸಂಪರ್ಕ ಜಾಲಕ್ಕೆ ಸಂಪರ್ಕ ನೀಡಿದ್ದು, ಇದನ್ನು ತೆರವುಗೊಳಿಸದಿದ್ದರೆ ಜುಲೈ 20ರ ಬಳಿಕ ದಂಡ ವಿಧಿಸುವುದಾಗಿ ಮನಪಾ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಒಳಚರಂಡಿ ಜಾಲದ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ದ್ರವ ತ್ಯಾಜ್ಯವು ಮಳೆ ನೀರಿನಿಂದಾಗಿ ಹರಿಯುತ್ತಿದೆ. ಮ್ಯಾನ್‌ಹೋಲ್‌ಗಳ ದ್ರವ ತ್ಯಾಜ್ಯವು ರಸ್ತೆಗಳಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅನಧಿಕೃತವಾಗಿ ಮಳೆ ನೀರನ್ನು ಒಳಚರಂಡಿ ಜಾಲಕ್ಕೆ ಸಂಪರ್ಕ ನೀಡಿದವರು ಜುಲೈ 20ರೊಳಗೆ ತೆರವುಗೊಳಿಸಬೇಕು. ತಪ್ಪಿದರೆ ಕರ್ನಾಟಕ ಮುನ್ಸಿಪಲ್ ಕಾಯ್ದೆಯಡಿ 10 ಸಾವಿರದಿಂದ 1 ಲಕ್ಷರೂ.ವರೆಗೆ ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಸಾರ್ವಜನಿಕರು ಯಾರಾದರೂ ಅನಧಿಕೃತವಾಗಿ ಒಳಚರಂಡಿ ಜಾಲಕ್ಕೆ ಮಳೆ ನೀರನ್ನು ಸಂಪರ್ಕಿಸಿರುವುದು ಕಂಡು ಬಂದರೆ ಪಾಲಿಕೆಯ ವಾಟ್ಸಾಪ್ ಸಹಾಯವಾಣಿ ಸಂ. 9449007722ಕ್ಕೆ ಛಾಯಾಚಿತ್ರದೊಂದಿಗೆ ಮಾಹಿತಿ ನೀಡುವಂತೆ ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News