ಕರ್ನಾಟಕ ಮುಸ್ಲಿಂ ಜಮಾಅತ್ ಹೊನ್ನಾಳ ಶಾಖೆ ನೇತೃತ್ವದಲ್ಲಿ ಉಚಿತ ಪುಸ್ತಕ ವಿತರಣೆ, ಸನ್ಮಾನ, ಕ್ಯಾರಿಯರ್ ಗೈಡನ್ಸ್

Update: 2023-06-25 13:42 GMT

ಬ್ರಹ್ಮಾವರ, ಜೂ.25: ಕರ್ನಾಟಕ ಮುಸ್ಲಿಂ ಜಮಾಅತ್ ಹೊನ್ನಾಳ ಶಾಖೆ ನೇತೃತ್ವದಲ್ಲಿ ಸುನ್ನಿ ಸ್ಟುಡೆಂಟ್ಸ್ ಫೇಡರೇಶನ್ ಹೊನ್ನಾಳ ಶಾಖೆಯ ವತಿಯಿಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳದ ವಿದ್ಯಾರ್ಥಿಗಳಿಗೆ ಸತತ 15ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ಗಳಿಗೆ ಮತ್ತು ಪೋಷಕರಿಗೆ ಕ್ಯಾರಿಯರ್ ಗೈಡೆನ್ಸ್ ಕಾರ್ಯಕ್ರಮ ಶಾಲಾ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಅಥೀತಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ಜೆ.ಮುಷ್ತಾಕ್ ಅಹ್ಮದ್, ಹಾರಾಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಗ್ರಾಪಂ ಸದಸ್ಯರಾದ ಗಣೇಶ್ ಶೆಟ್ಟಿ, ಸೈಯದ್ ಅಬೂ ಮುಹಮ್ಮದ್, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ, ಖತೀಬ್ ಅಕ್ಬರ್ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರಿನ ಮುಹಮ್ಮದ್ ರಫೀಕ್, ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ವಿಶೇಶ ತರಬೇತಿ ಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಪ್ರಸ್ತುತ ವರ್ಷ ಇಂಜಿನಿಯರ್‌ಗಳಾದ ಎಸ್‌ಎಸ್‌ಎಫ್‌ನ ಐದು ಸದಸ್ಯರಾದ ಮುಹಮ್ಮದ್ ರಾಯಿದ್, ಸದೀದ್ ಕೆ., ಮುಹೀಫ್ ಎನ್., ಮುಫೀದ್ ಖಾಜಿ, ಮುಹಮ್ಮದ್ ಖಾಲಿದ್ ಅವರನ್ನು ಸನ್ಮಾನಿಸಲಾಯಿತು.

ಇಮ್ರಾನ್ ಹೆನ್ನಾಬೈಲ್, ಬಿ.ಎಸ್.ಸುಬ್ಹಾನ್, ಅರ್ಝಾಕ್ ಹೊನ್ನಾಳ, ಅರಿಫುಲ್ಲಾ, ನಯಾಜ್ ಹನೀಫ್, ಫೈಝಾನ್ ನಸ್ರುಲ್ಲಾ, ರೆಹಾನ್ ರಫೀಕ್, ಮುಹಮ್ಮದ್ ಗೌಸ್ ಕೆ., ಸುಲೈಮಾನ್, ಶಾಲಾ ಅಧ್ಯಾಪಕ ವೃಂದ, ಶಾಲಾ ಮಕ್ಕಳು, ಪೋಷಕರು ಉಪಸ್ಥಿತರಿದ್ದರು. ಸುಭಾನ್ ಅಹ್ಮದ್ ಹೊನ್ನಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಸೈಫಾಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News