ಬೊಳ್ಳೂರು ರಿಲಯನ್ಸ್ ಅಸೋಸಿಯೇಷನ್‌ನಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Update: 2023-06-28 08:13 GMT

ಹಳೆಯಂಗಡಿ, ಜೂ.24: ರಿಲಯನ್ಸ್ ಅಸೋಸಿಯೇಷನ್ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ತೈತೋಟ ಚಾರಿಟೇಬಲ್ ಟ್ರಸ್ಟ್ ಬೊಳ್ಳೂರು ಇದರ ಸಹಭಾಗಿತ್ವದಲ್ಲಿ ಬೊಳ್ಳೂರು ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೊಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ್, ಕಳೆದ 20 ವರ್ಷಗಳಿಂದ ವರ್ಷಂಪ್ರತಿ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಶಾಲೆಗೆ ಬೇಕಾದ ಅಗತ್ಯ ಸಹಕಾರವನ್ನು ಈ ಸಂಸ್ಥೆ ನೀಡುತ್ತಾ ಬಂದಿದೆ. ಈ ವರ್ಷವೂ ಸಂಸ್ಥೆಯೊಂದಿಗೆ ಮನವಿ ಮಾಡಿದಾಗ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಪುಸ್ತಕದ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಇಲ್ಲಿ ಹಲವಾರು ಮನೆಗಳಿದ್ದು, ಬೊಳ್ಳೂರು ಮಸೀದಿ ಹಾಗೂ ಸಂಸ್ಥೆಯ ಸಹಕಾರ ದೊರಕಿದರೆ ಈ ಶಾಲೆಯಲ್ಲೀ ಎಲ್ ಕೆಜಿ, ಯುಕೆಜಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಬಹುದು ಎಂದು ಇಂಗಿತ ವ್ಯಕ್ತಪಡಿಸಿದರು.

ರಿಲಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಕಲಂದರ್ ಕೌಶಿಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಝೀಝ್ ಐ.ಎ.ಕೆ., ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಬಾರಕ್ ಬೊಳ್ಳೂರು, ರಿಲಯನ್ಸ್ ಸೌದಿ ಘಟಕದ ಜೊತೆ ಕಾರ್ಯದರ್ಶಿ ಆದಿಲ್ ಕಲ್ಲಾಪು, ಸಲಹೆಗಾರ ಶಮೀಮ್ ಪಳ್ಳಿಗುಡ್ಡೆ, ರಿಲಯನ್ಸ್ ಕತಾರ್ ಘಟಕದ ಅಶ್ರಫ್ ಅಲ್ ಅಕ್ಸ ಉಪಸ್ಥಿತರಿದ್ದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಫಾರೂಕ್ ಫ್ಯಾನ್ಸಿ, ಲೆಕ್ಕ ಪರಿಶೋಧಕ ಅಕ್ಬರ್ ಬೊಳ್ಳೂರು, ಮಾಧ್ಯಮ ಉಸ್ತುವಾರಿ ಕಬೀರ್ ಎ.ಆರ್, ಸಂಸ್ಥೆಯ ಸದಸ್ಯರಾದ ಶಮೀಮ್ ಬೊಳ್ಳೂರು, ಮಮ್ತಾಜ್ ಕಲ್ಲಾಪು, ಇಕ್ಬಾಲ್ ಎಂ.ಎ, ಸಿದ್ದಿಕ್ ಬೊಳ್ಳೂರು, ಶಮೀಮ್ ನವರಂಗ್, ಶರೀಫ್ ಕತಾರ್, ನಝೀರ್ ಎಂ.ಎಂ., ಇಸ್ಮಾಯಿಲ್ ಬಾವ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಸಲಹೆಗಾರ ಆರಿಶ್ ನವರಂಗ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News