‘ಮಂಗಳೂರು ಐಎಂಎ’ಯಿಂದ ಉಚಿತ ಆರೋಗ್ಯ ಸೇವೆ: ಡಾ. ವೇಣುಗೋಪಾಲ್

Update: 2023-07-01 15:34 GMT

ಮಂಗಳೂರು, ಜು.1: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಮಂಗಳೂರು ಘಟಕದ ವತಿಯಿಂದ ದ.ಕ. ಜಿಲ್ಲೆಯ ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ಸಲಹೆ, ಮಾರ್ಗದರ್ಶನ ನೀಡುವ ಯೋಜನೆಯನ್ನು ಏರ್ಪಡಿಸಲಾಗಿದೆ. ಐಎಂಎ ಕಚೇರಿಯ ಮೊ.ಸಂ: 7022283999ಕ್ಕೆ ಕರೆ ಮಾಡಿದರೆ ತಜ್ಞ ವೈದ್ಯರು ಉಚಿತವಾಗಿ ಆರೋಗ್ಯ ಸಲಹೆ ನೀಡಲಿದ್ದಾರೆ ಎಂದು ಮಂಗಳೂರು ಐಎಂಎ ಅಧ್ಯಕ್ಷ ಡಾ. ವೇಣುಗೋಪಾಲ್ ಹೇಳಿದರು.

ನಗರದ ಐಎಂಎ ಹಾಲ್‌ನಲ್ಲಿ ಶನಿವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜು.3ರಿಂದ ಆರಂಭವಾಗಲಿರುವ ಈ ನೂತನ ಸೇವೆಯು ಸಂಪೂರ್ಣ ಉಚಿತವಾಗಿದೆ. ಕರೆ ಮಾಡಿದವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಸಂಬಂಧಿಸಿದ ತಜ್ಞ ವೈದ್ಯರ ಮೂಲಕ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಈ ಸೇವೆ ಲಭ್ಯವಿರಲಿದೆ ಎಂದರು.

*ಐಎಂಎ ಮಂಗಳೂರು ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಮೂವರು ಹಿರಿಯ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕುಟುಂಬ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಮಚಂದ್ರ ಭಟ್, ಹಿರಿಯ ಮನೋರೋಗ ತಜ್ಞ ಡಾ. ಸತೀಶ್ ರಾವ್, ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಜಯರಾಮ್ ಶೆಣೈಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಈ ಸಂದರ್ಭ ಐಎಂಎ ಪದಾಧಿಕಾರಿಗಳಾದ ಡಾ. ಅರ್ಚಿತ್ ಬೋಳೂರು, ಡಾ. ನಂದಕಿಶೋರ್, ಡಾ. ಕೆ.ಆರ್. ಕಾಮತ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News