ದ.ಕ.ಜಿಲ್ಲೆಯಲ್ಲಿ ಉತ್ತಮ ಮಳೆ

Update: 2023-07-13 15:01 GMT

ಮಂಗಳೂರು, ಜು.13: ದ.ಕ.ಜಿಲ್ಲೆಯ ನಾನಾ ಕಡೆ ಗುರುವಾರ ಉತ್ತಮ ಮಳೆಯಾಗಿದ್ದು, ಮೋಡ ಕವಿದ ವಾತಾವರಣವಿತ್ತು. ಗುರುವಾರ ಜಿಲ್ಲೆಯಲ್ಲಿ 1 ಮನೆ ಪೂರ್ಣ ಹಾನಿಯಾದರೆ, 3 ಮನೆಗಳು ಭಾಗಶಃ ಹಾನಿಯಾಗಿದೆ. ಎರಡು ಕಾಳಜಿ ಕೇಂದ್ರಕ್ಕೆ 12 ಮಂದಿಯನ್ನು ಸೇರಿಸಲಾಗಿದೆ. 22 ವಿದ್ಯುತ್ ಕಂಬಗಳು ಮುರಿದು ಹೋಗಿದೆ. ತುಂಬೆ ಡ್ಯಾಂನ ನೀರಿನ ಮಟ್ಟ 1.8 ಮೀಟರ್ ಇದೆ.

ಹವಾಮಾನ ಇಲಾಖೆಯ ಪ್ರಕಾರ ಮುಂದಿನ 3-4 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಜುಲೈ 18ರಿಂದ ಮಳೆ ಮತ್ತೆ ಚುರುಕಾಗುವ ಸಾಧ್ಯತೆ ಇದೆ.

ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರವರೆಗೆ ಜಿಲ್ಲೆಯಲ್ಲಿ 39.4 ಮಿಮೀ ಮಳೆಯಾಗಿದೆ. ಈ ಪೈಕಿ ಮೂಡುಬಿದಿರೆ 59.7 ಮಿಮೀ, ಮಂಗಳೂರು 54. 5ಮಿಮೀ, ಬಂಟ್ವಾಳ 49.6 ಮಿಮೀ, ಬೆಳ್ತಂಗಡಿ 36.6 ಮಿಮಿ, ಸುಳ್ಯ 35.4 ಮಿಮೀ, ಪುತ್ತೂರು 28.8 ಮಿಮೀ, ಕಡಬ 25 ಮಿಮಿ, ಮಳೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News