ಗ್ರಾಮಚಾವಡಿ: ಮಾದಕ ದ್ರವ್ಯ ವಿರುದ್ಧ ಜಾಗೃತಿ ಅಭಿಯಾನ

Update: 2023-06-25 12:34 GMT

ಕೊಣಾಜೆ, ಜೂ.25: ಎಸೆಸ್ಸೆಫ್ ಹರೇಕಳ ಮತ್ತು ಕೊಣಾಜೆ ಸೆಕ್ಟರ್ ವತಿಯಿಂದ ‘ಮಾದಕ ದ್ರವ್ಯದ ವಿರುದ್ಧ ಜಾಗೃತಿ ಅಭಿಯಾನ’ವು ಗ್ರಾಮಚಾವಡಿ ಜಂಕ್ಷನ್‌ನಲ್ಲಿ ರವಿವಾರ ನಡೆಯಿತು.

ಎಸೆಸ್ಸೆಫ್ ಕೊಣಾಜೆ ಸೆಕ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಪಜೀರ್ ಅಧ್ಯಕ್ಷತೆ ವಹಿಸಿದ್ದರು. ಎಸೆಸ್ಸೆಫ್ ರಾಜ್ಯ ಕ್ಯಾಂಪಸ್ ಸೆಕ್ರೆಟರಿ ಉಬೈದುಲ್ಲಾ ಆರ್.ಜಿ.ನಗರ ಕಾರ್ಯಕ್ರಮ ಉದ್ಘಾಟಿಸಿದರು.

ಹರೇಕಳ ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಹಾಗೂ ಫಜೀರ್ ಗ್ರಾಪಂ ಸದಸ್ಯ ಇಮ್ತಿಯಾಝ್ ಸಂದೇಶ ಭಾಷಣಗೈದರು. ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮುಖ್ಯ ಭಾಷಣಗೈದರು. ಎಸೆಸ್ಸೆಫ್ ಆಲಡ್ಕ ಘಟಕದ ಕ್ಯಾಂಪಸ್ ಸದಸ್ಯ ಅಫೀಫ್ ಆಲಡ್ಕ ‘ಮಾದಕ ದ್ರವ್ಯ ವ್ಯಸನದಿಂದ ಆಗುವ ದುಷ್ಪರಿಣಾಮ’ದ ಬಗ್ಗೆ ಮಾಹಿತಿ ನೀಡಿದರು.

ಎಸೆಸ್ಸೆಫ್ ಹರೇಕಳ ಸೆಕ್ಟರ್ ಕ್ಯಾಂಪಸ್ ಸೆಕ್ರೆಟರಿ ಆತೀಫ್ ಮಾಸ್ಟರ್ ಸ್ವಾಗತಿಸಿದರು. ಪಾವೂರು ಗ್ರಾಪಂ ಸದಸ್ಯ ಇಕ್ಬಾಲ್ ಇನೋಳಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News