ಹರೀಶ್ ಹಂದೆಗೆ ಗೌರವ ಡಾಕ್ಟರೇಟ್

Update: 2023-07-05 16:11 GMT

ಮಣಿಪಾಲ: ಸೆಲ್ಕೋ ಸಮೂಹ ಸಂಸ್ಥೆಗಳ ಸ್ಥಾಪಕ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಉಡುಪಿ ಜಿಲ್ಲೆಯ ಕೋಟ ಮೂಲದ ಡಾ.ಹರೀಶ್ ಹಂದೆ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಡಾ. ಹಂದೆಯವರ ಪ್ರಯತ್ನದ ಫಲವಾಗಿ ದೇಶದ ೧.೨ ಲಕ್ಷಕ್ಕೂ ಅಧಿಕ ಬಡವರ ಮನೆಗಳಲ್ಲಿ ಇಂದು ಸೌರದೀಪ ಬೆಳಗುತ್ತಿದೆ. ಡಾ.ಹರೀಶ್ ಹಂದೆ ಭಾರತದಲ್ಲಿ ಸ್ಥಾಪಿಸಿದ ಸೆಲ್ಕೋ ಮಾದರಿಯಲ್ಲಿ ಸಾಮಾಜಿಕ ಉದ್ಯಮದ ಮೂಲಕ ಸುಸ್ಥಿರ ಇಂಧನವನ್ನು ಬಡ ಜನತೆಗೆ ಒದಗಿಸುವ ಪ್ರಕ್ರಿಯೆ ಈಗ ಜಗತ್ತಿನಾದ್ಯಂತ ಯಶಸ್ವಿಯಾಗಿ ಪುನರಾವರ್ತನೆಯಾಗಿದೆ.

ಕೋಲಾರದ ನಂದಿನಿ ಪ್ಯಾಲೇಸ್‌ನಲ್ಲಿ ನಡೆದ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು, ಡಾ. ಹಂದೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News