ತುಂಬೆ | ಭಾರೀ ಮಳೆಗೆ ಮನೆಯ ಕಾಂಪೌಂಡ್ ಕುಸಿತ: ಅಪಾರ ನಷ್ಟ
Update: 2023-07-05 07:19 GMT
ಬಂಟ್ವಾಳ: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ನಿರಂತರ ಸುರಿಯುತ್ತಿರುವ ಮಳೆಗೆ ಮನೆಯೊಂದರ ಕಂಪೌಂಡ್ ಕುಸಿದು ಸಮೀಪದ ಮನೆಯ ಗೋಡೆ ಹಾನಿಗೊಳಗಾಗಿರುವ ಘಟನೆ ತುಂಬೆ ಗ್ರಾಮದ ರೊಟ್ಟಿಗುಡ್ಡೆ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಶಶಿ ರೊಟ್ಟಿಗುಡ್ಡೆ ಎಂಬವರ ಮನೆಯ ಸುತ್ತಲೂ ನೂತನವಾಗಿ ನಿರ್ಮಿಸಿದ್ದ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮ ಅಲ್ಲೇ ಸಮೀಪದ ರಾಮಚಂದ್ರ ಎಂಬವರ ಮನೆಯ ಗೋಡೆ ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟವಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ತುಂಬೆ ಗ್ರಾಮ ಲೆಕ್ಕಾಧಿಕಾರಿ, ತುಂಬೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ತುಂಬೆ, ಪಂಚಾಯತ್ ಸದಸ್ಯರಾದ ಝವುರ್ ತುಂಬೆ, ಅಝೀಝ್ ತುಂಬೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.