ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಪ್ರದರ್ಶನ ಉದ್ಘಾಟನೆ
ಉಡುಪಿ : ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಗಳ ಪುಸ್ತಕ ಪ್ರದರ್ಶನ, ಗ್ರಂಥಾಲಯದ ಫೋಟೊ ಗ್ಯಾಲರಿಯ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಕೆ. ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಒಂದಕ್ಕೊಂದು ಲಿಂಕ್ ಇರುತ್ತದೆ. ದಿನಪತ್ರಿಕೆಗಳು ಹಾಗೂ ಕಾಂಪಿಟೀಶನ್ ಸಕ್ಸಸ್ ರಿವಿವ್ಯೆ, ದಿಕ್ಸೂಚಿ, ಸ್ಪರ್ಧಾಸ್ಪೂರ್ತಿ ಇನ್ನಿತರ ಮ್ಯಾಗಜೀನ್‌ಗಳನ್ನು ಓದಿದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗೆತಯಾರಾಗಬಹುದು ಎಂದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ವಾಣಿ ಬಲ್ಲಾಳ್, ಕನ್ನಡ ಪ್ರಾದ್ಯಾಪಕ ಡಾ.ನಿಕೇತನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತಿಹಾಸ ಪ್ರಾಧ್ಯಾಪಕ ರಾಮ್‌ದಾಸ್ ಪ್ರಭು, ಗುರುರಾಜ್ ಪ್ರಭು, ಹಾಗೂ ಪತ್ರಿಕೋದ್ಯಮ ಪ್ರಾದ್ಯಾಪಕ ಸಚ್ಚೇಂದ್ರ, ಗ್ರಂಥಾಲಯ ಸಿಬ್ಬಂದಿಗಳಾದ ಶಮ್ಮಿ ಕೆ.ವಿಜಯಲಕ್ಷ್ಮಿ, ಲಾವಣ್ಯ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಹಾಗೂ ಆಯ್ಕೆ ಶ್ರೇಣಿ ಗ್ರಂಥಾಪಾಲಕಿ ಯಶೋದಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳ ಗೌರಿ ವಿಷ್ಣು ಭಟ್ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ವಾಣಿ ವಂದಿಸಿದರು.